ಮಡಿಕೇರಿ, ಏ. ೯: ಸಿದ್ದಾಪುರದ ಟೀಕ್‌ವುಡ್ ಎಸ್ಟೇಟಿನಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜಾ ಮಹೋತ್ಸವ ತಾ. ೧೯ ರಂದು ನಡೆಯಲಿದೆ.

ಶ್ರೀ ಲಾಶ್ರೀ ಪಂದ್ರಿಮಲೈ ಸಕ್ತಿ ವಡಿವೇಲ್ ಸ್ವಾಮಿಗಳ ಉಪಸ್ಥಿತಿಯಲ್ಲಿ ಹಾಗೂ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ಚಂಡಿಕಾ ಯಾಗ, ೧ ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ೧.೩೦ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ ೬ ಗಂಟೆಗೆ ತಯಂಬಕ (ಕೇರಳ ಚಂಡೆ), ೭.೩೦ ರಿಂದ ೯ ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ೯ ಗಂಟೆಗೆ ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ ನಡೆಯಲಿದೆ.