ಮಡಿಕೇರಿ, ಏ. ೮: ಕಡಿಯತ್‌ನಾಡು ಚೇಲಾವರ ಗ್ರಾಮ ಪೊನ್ನೋಲ ಶಾಸ್ತಾವು ಬಯತ್ತೂರು ದೇವರು ಹಾಗೂ ಪುದಿಯೋದಿ ದೇವಿಯ ವಾರ್ಷಿಕ ಉತ್ಸವ ತಾ. ೧೪ ರಿಂದ ೧೮ ರವರೆಗೆ ನಡೆಯಲಿದೆ.

ತಾ. ೧೪ ರಂದು ಬೆಳಿಗ್ಗೆ ೯ ಗಂಟೆಗೆ ದೇವತಕ್ಕರಾದ ಪಡಿಂಞರಮ್ಮAಡ ಮನೆಯಿಂದ ಭಂಡಾರ ತರುವುದು, ೯.೩೦ಕ್ಕೆ ಎತ್ತುಪೋರಾಟ ೧೨.೩೦ ಗಂಟೆಗೆ ಮಹಾಪೂಜೆ, ಸಂಜೆ ೭ ಗಂಟೆಗೆ ಅಂದಿ ಬೊಳಕು, ರಾತ್ರಿ ೮ ಗಂಟೆಗೆ ಕಲಶ ಪೂಜೆ, ತೆಂಗೆಪೋರ್, ತಾ. ೧೫ ರಂದು ಬೆಳಿಗ್ಗೆ ೫ ಗಂಟೆಗೆ ಕಣಿಪೂಜೆ, ೧೨.೩೦ ಗಂಟೆಗೆ ಮಹಾಪೂಜೆ, ೨ ಗಂಟೆಗೆ ದೇವತಕ್ಕರಲ್ಲಿಗೆ ಭಂಡಾರ ತೆಗೆದುಕೊಂಡು ಹೋಗುವುದು. ತಾ. ೧೭ ರಂದು ಬೆಳಿಗ್ಗೆ ಮೇಲೇರಿಗೆ ಸೌದೆ ಕಡಿಯುವುದು, ರಾತ್ರಿ ೮ ಗಂಟೆಗೆ ದೇವತಕ್ಕರಲ್ಲಿಂದ ಭಂಡಾರ ತರುವುದು, ರಾತ್ರಿ ೧೦ ಗಂಟೆಗೆ ತೋತ ತೆರೆ, ೧೨ ಗಂಟೆಗೆ ಬೀರಾಳಿ ತೆರೆ, ತಾ. ೧೮ ರಂದು ಬೆಳಿಗ್ಗೆ ೪ ಮುಂಜಾನೆ ಪುದಿಯೋದಿ ತೆರೆ, ಬೆಳಿಗ್ಗೆ ೭ ಗಂಟೆಗೆ ಭದ್ರಕಾಳಿ ತೆರೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.