ಮಡಿಕೇರಿ, ಏ. ೮: ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವತಿಯಿಂದ ಆಯೋಜಿಸಿರುವ ೮ನೇ ಅವೃತ್ತಿಯ ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮಕ್ಕೆ ಮಡಿಕೇರಿ, ಏ. ೮: ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವತಿಯಿಂದ ಆಯೋಜಿಸಿರುವ ೮ನೇ ಅವೃತ್ತಿಯ ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮಕ್ಕೆ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಯುವಜನತೆ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಬೇಕು. ದೈನಂದಿನ ಚಟುವಟಿಕೆಗಳಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಹಕ್ಕಿಗಳ ಕಲರವದಿಂದ ದಿನ ಆರಂಭ ಗೊಳ್ಳುತ್ತದೆ. ಕೃಷಿಯಲ್ಲಿಯೂ ಹಕ್ಕಿ ಮಹತ್ವದ ಭಾಗವಾಗಿದೆ ಎಂದರು.
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹಕ್ಕಿಹಬ್ಬ ಕಾರ್ಯಕ್ರಮ ಸಮಾಜಕ್ಕೆ ಪೂರಕವಾಗಿದೆ. ಹಕ್ಕಿಗಳ ಮಹತ್ವವನ್ನು ಇದರಿಂದ ಕಲಿಯಬಹುದಾಗಿದೆ. ಕೊಡಗು ಜಿಲ್ಲೆಯೂ ಪಶ್ಚಿಮ ಘಟ್ಟಗಳ ಮತ್ತು ಬಯಲು ಸೀಮೆಯ ನಡುವೆ ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ದಟ್ಟ ಕಾಡುಗಳು ಹಾಗೂ ಹಲವಾರು ಪವಿತ್ರ ಮರಗಳ ತೋಪುಗಳಿಂದ ಸಮೃದ್ಧವಾಗಿದೆ. ಮುನ್ನೂರಕ್ಕೂ ಹೆಚ್ಚು ವಿವಿಧ ಪ್ರಬೇಧ ಪಕ್ಷಿಗಳಿದ್ದು, ಈ ಪ್ರದೇಶವನ್ನು ಪಕ್ಷಿಗಳು ಮನೆ ಮಾಡಿಕೊಂಡಿವೆ. ಇವುಗಳ ಜೊತೆಗೆ ಪ್ರತಿ ವರ್ಷ ಹಲವಾರು ವಲಸೆ ಪಕ್ಷಿಗಳು ಮಲೆನಾಡು ಪ್ರದೇಶಗಳಿಗೆ ಭೇಟಿ ನೀಡುತ್ತವೆ ಎಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷಿಗಳ ನಾಶದಿಂದ ವಿವಿಧ ಜಾತಿಯ ಮರಗಿಡಗಳು ಕಣ್ಮರೆಯಾಗುತ್ತವೆ. ಎಲ್ಲಾ ಜೀವಿಗಳಿಗೆ ತನ್ನದೇ ಆದ ಮಹತ್ವವಿದೆ. ಈ ಹಿನ್ನೆಲೆ ಹಕ್ಕಿ ಹಬ್ಬ ಆಚರಿಸಲಾಗುತ್ತದೆ. ಪರಿಸರ ಬೆಳವಣಿಗೆಯಲ್ಲಿಯೂ ಹಕ್ಕಿಯ ಪಾತ್ರ ಮುಖ್ಯವಾಗಿದೆ. ಅರಣ್ಯ ಇಲಾಖೆಗೂ ಹೆಚ್ಚಿನ ಪ್ರಮಾಣದಲ್ಲಿ ಹಕ್ಕಿಗಳು ಪರಿಸರ ಬೆಳವಣಿಗೆಗೆ ಸಹಾಯ ಮಾಡುತ್ತಿದೆ.
(ಮೊದಲ ಪುಟದಿಂದ) ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವು ಒಂದಕ್ಕೊAದು ಅವಲಂಬಿಸಿಕೊAಡಿದೆ. ಗಿಡ ಮರಗಳು, ಪಕ್ಷಿಯನ್ನು ಅವಲಂಬಿಸಿಕೊAಡಿದೆ. ಪಕ್ಷಿಗಳು ಕೂಡ ಮರ ಗಿಡಗಳನ್ನು ಅವಲಂಬಿಸಿಕೊಡಿದೆ. ಹಲವಾರು ವಿಧದ ಸಸ್ಯಗಳ ಪರಾಗಸ್ಪರ್ಶಕ್ಕೆ ಪಕ್ಷಿಗಳು ಸಹಾಕಾರಿಯಾಗಿದೆ. ಗಿಡಗಳ ಬೆಳವಣಿಗೆಗೆ ಪಕ್ಷಿಗಳು ಕೂಡ ಮನುಷ್ಯನಂತೆ ಪ್ರಮುಖ ಪಾತ್ರ ವಹಿಸುತ್ತದೆ. ಹಕ್ಕಿಗಳಿಂದ ಸುತ್ತಲಿನ ಪರಿಸರವು ಬಣ್ಣಮಯವಾಗಿ ಕಾಣುತ್ತದೆ. ವ್ಶೆಜ್ಞಾನಿಕ ಮನೋಬಾವದ ಜೊತೆಗೆ ಪ್ರಕೃತಿಯ ಬಗ್ಗೆ ಒಲವು ತೋರಲು ಪಕ್ಷಿಗಳು ಸಹಕಾರಿಯಾಗಿದೆ. ಪಕ್ಷಿಗಳು ಒಟ್ಟಾಗಿ ಜೀವನ ನಡೆಸುತ್ತವೆ. ಹಕ್ಕಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಟ್ಟಾಗಿ ತೆರಳುತ್ತದೆ. ಪಕ್ಷಿಗಳು ತಮ್ಮದೇ ಆದ ಸಂವಹನ ನಡೆಸುತ್ತದೆ. ಇದು ಮನುಷ್ಯನಿಗೆ ಅರ್ಥವಾಗುವುದು ಕಷ್ಟ. ಆದರೆ ಪಕ್ಷಿಗಳಿಗೆ ಅದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ಪರಿಸರ ಪ್ರವಾಸೋದ್ಯಮ ಸೆಳೆತ ಹೆಚ್ಚಾಗುತ್ತಿದೆ. ಪಕ್ಷಿ ಹಬ್ಬದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಹಕ್ಕಿಯಿಂದಾಗುವ ವಿಸ್ಮಯಗಳನ್ನು ಮಕ್ಕಳಿಗೆ ಕಲಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು. ತಾ. ೧೦ ರ ತನಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ಡಿ.ಆರ್.ಎಫ್.ಓ. ಕನ್ನಂಡ ರಂಜನ್ ಮತ್ತು ವನ್ಯಜೀವಿ ಛಾಯಗ್ರಾಹಕ ವಿನೋದ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಗ್ರಾಹಕರು ತೆಗೆದ ಛಾಯಚಿತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳ ಅಧ್ಯಕ್ಷ ಮದನ್ ಗೋಪಾಲ್, ನಗರಾಸಭಾ ಅಧ್ಯಕ್ಷ ಅನಿತಾ ಪೂವಯ್ಯ, ಆನೆ ಯೋಜನೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಮೈಸೂರು ಹಾಗೂ ಕೊಡಗು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ, ಅರಣ್ಯ ಕಾಲೇಜು ಮುಖ್ಯಸ್ಥ ಸಿ.ಜಿ. ಕುಶಾಲಪ್ಪ, , ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಟಿ. ಪೂವಯ್ಯ, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಇದ್ದರು.