ಕೊಡ್ಲಿಪೇಟೆಯ ಗ್ರಂಥಾಲಯದಲ್ಲಿ ಹಲವಾರು ವರ್ಷಗಳಿಂದ ಗ್ರಂಥ ಪಾಲಕರಾಗಿದ್ದ ಜಿಲ್ಲೆಯ ಸಾಹಿತಿ ಮ.ಕ. ಚಂದ್ರಶೇಖರ ಮಲ್ಲೋರಹಟ್ಟಿ (೭೨) ಅವರು ತಾ. ೯ ರಂದು ಕೇರಳದಲ್ಲಿ ಹೃದಯಾಘಾತದಿಂದ ನಿಧನರಾದರು.
ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ಮಲ್ಲೋರಹಟ್ಟಿ ಅವರು ೫ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಿವೃತ್ತಿ ನಂತರ ಮೈಸೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ಚಿತ್ರದುರ್ಗದ ಮಲ್ಲೋರಹಟ್ಟಿಯಲ್ಲಿ ನಡೆಯಲಿದೆ.