ಮಡಿಕೇರಿ, ಏ. ೯: ಸಹಕಾರ ಸಂಘಗಳಿಗೆ ‘ಒನ್ ಟೈಮ್ ಸೆಟಲ್ಮೆಂಟ್’ ಮೂಲಕ ಸಾಲ ಮರುಪಾವತಿ ಮಾಡಿರುವ ರೈತರಿಗೆ ಹೊಸದಾಗಿ ಸಾಲ ಸೌಲಭ್ಯ ಕಲ್ಪಿಸಲು ಕೆಲ ಸಹಕಾರಿ ಬ್ಯಾಂಕುಗಳು ನಿರಾಕರಿಸುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೊಡಗು ಪ್ಲಾಂರ್ಸ್ ಅಸೋಸಿಯೇಷನ್ ಸದಸ್ಯರು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಬಾಂಡ್ ಗಣಪತಿ ಅವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ಶುಭ ಹಾರೈಸಿದ ಸದಸ್ಯರು ರೈತರಿಗೆ ಸಾಲ ಪಡೆಯಲು ಅನುಕೂಲ ಕಲ್ಪಿಸುವಂತೆ ಕೋರಿಕೊಂಡರು.
೨೦೧೮, ೨೦೧೯, ೨೦೨೦ ಹಾಗೂ ೨೦೨೧ರ ಅತಿವೃಷ್ಟಿಯಿಂದಾಗಿ ಬೆಳೆ ನಾಶ ಸಂಭವಿಸಿದ್ದು ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿತ್ತು. ‘ಒನ್ ಟೈಮ್ ಸೆಟಲ್ಮೆಂಟ್’ ಯೋಜನೆಯ ಮೂಲಕ ರೈತರು ಸಾಲದ ಭಾಗಶಃ ಮೊತ್ತವನ್ನು ಮಾತ್ರ ಬ್ಯಾಂಕುಗಳಿಗೆ ಹಿಂತಿರುಗಿಸಿ ಸಂಪೂರ್ಣ ಸಾಲ ಮುಕ್ತವಾಗುವಂತಹ ಸೌಲಭ್ಯ ಒದಗಿಸ ಲಾಗಿತ್ತು. ಆದರೆ ಈ ಯೋಜನೆಯ ಪ್ರಯೋಜನ ಪಡೆದ ಬೆಳೆಗಾರರ ಸಂಘದ ಕೆಲ ಸದಸ್ಯರಿಗೆ ಸಹಕಾರ ಬ್ಯಾಂಕಿನಿAದ ಸಾಲ ನಿರಾಕರಣೆಯಾ ಗುತ್ತಿದೆ. ಮುಂದೆ ಈ ರೀತಿ ನಿರಾಕರಿಸ ದಂತೆ ಕ್ರಮ ಕೈಗೊಳ್ಳಬೇಕಾಗಿ ಸಂಘದ ಸದಸ್ಯರು ಮನವಿ ಮಾಡಿಕೊಂಡರು.
ಈ ಸಂದರ್ಭ ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ದಾಸ್, ಸದಸ್ಯರಾದ ಕೈಬುಲೀರ ಹರೀಶ್ ಅಪ್ಪಯ್ಯ, ಚೇರಂಡ ನಂದಾ ಸುಬ್ಬಯ್ಯ, ಕೆ.ಕೆ ವಿಶ್ವನಾಥ್ ಅವರುಗಳು ಹಾಜರಿದ್ದರು.