ಮಡಿಕೇರಿ, ಏ. ೯: ಮಡಿಕೇರಿ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಎಸ್. ಗಣಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಹೆಚ್.ಎಂ. ಕೃಷ್ಣ, ಜೆ.ಎಲ್. ಜನಾರ್ಧನ್, ಎಸ್.ಎ. ಪ್ರತಾಪ್, ಎಸ್.ಬಿ. ಜಯಪ್ಪ ಹಾನಗಲ್, ಕೆ.ಬಿ. ರಾಜು, ಹೆಚ್.ಎನ್. ಶಾರದ, ಪಳನಿ ಪ್ರಕಾಶ್ ಕೆ., ಗಾಯತ್ರಿ ನರಸಿಂಹನ್, ಸಿ.ಜೆ. ಮೋಹನ್ ಮೌರ್ಯ, ಎಸ್.ಎನ್. ಗೀತಾ ಹಾಗೂ ಹೆಚ್.ಟಿ. ಶೋಭಾ ನೇಮಕಗೊಂಡಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ೫ ವರ್ಷಗಳಿಗೆ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.