ಗೋಣಿಕೊಪ್ಪ ವರದಿ, ಏ. ೮ ; ಮಾಯಮುಡಿ ಗ್ರಾಮದಲ್ಲಿ ಕಾಫಿ ವ್ಯಾಪಾರ ಮಾಡುತ್ತಿದ್ದ ಗೋಣಿಕೊಪ್ಪ ಕಾವೇರಿ ಹಿಲ್ಸ್ ನಿವಾಸಿ ಟಿ.ಕೆ. ಅಸ್ಕರ್ (೪೪) ತಾ. ೫ ರಿಂದ ನಾಪತ್ತೆ ಯಾಗಿದ್ದಾರೆ.
ಬೆಳಿಗ್ಗೆ ೪.೩೦ ಸುಮಾರಿಗೆ ಕುಶಾಲನಗರಕ್ಕೆ ತೆರಳುವುದಾಗಿ ಇನ್ನೊವ ಕಾರಿನಲ್ಲಿ ಗೋಣಿಕೊಪ್ಪದಿಂದ ಹೋದವರು ಹಿಂತಿರುಗಿ ಬಂದಿಲ್ಲ. ಕಾರು ಕೂಡ ಪತ್ತೆಯಾಗಿಲ್ಲ.
ಹಲವು ವರ್ಷಗಳಿಂದ ಮಾಯಮುಡಿಯಲ್ಲಿ ಕಾಫಿ ಖರೀದಿ ಮಾಡುತ್ತಿದ್ದರು. ಈ ಬಗ್ಗೆ ಅಸ್ಕರ್ ಪತ್ನಿ ಟಿ. ಎ. ಫಾರಿದಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದವರು ೦೮೨೭೪ ೨೪೭೩೩೩ ಸಂಖ್ಯೆಗೆ ತಿಳಿಸುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.