ಮಡಿಕೇರಿ, ಏ. ೮: ಮಡಿಕೇರಿಯ ಪ್ರಮುಖ ಕೊಡವಕೇರಿಗಳ ಪೈಕಿ ಒಂದಾಗಿರುವ ದೇಚೂರು ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಕರ್ತವ್ಯಕ್ಕೆ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಕೇರಿಯ ಸದಸ್ಯರೂ ಆಗಿರುವ ಗ್ರಾಮಾಂತರ ವೃತ್ತ ನಿರೀಕ್ಷಕ ಪೆಮ್ಮಚಂಡ ಅನೂಪ್ ಮಾದಪ್ಪ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ರವಿ ಕುಂಞಪ್ಪ ಅವರು ಮಾತನಾಡಿ, ಸಂಘದ ಈ ಹಿಂದಿನ ಕಾರ್ಯಚಟುವಟಿಕೆ ಕೊರೊನಾ ಕಾರಣದಿಂದಾಗಿ ಎದುರಾದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಇದರ ನಡುವೆಯೂ ನಡೆಸಿರುವ ಕೆಲಸ - ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಕೂಪದಿರ ಸುಂದರಿ ಮಾಚಯ್ಯ, ಕಾರ್ಯದರ್ಶಿ ಮೇವಡ ನಾಣಯ್ಯ, ಖಜಾಂಚಿ ಬೊಳಂದAಡ ಅಪ್ಪಣ್ಣ, ಪಂಜೇರಿರ ಬೆಳ್ಯಪ್ಪ, ಅನೂಪ್ ಮಾದಪ್ಪ ಹಾಜರಿದ್ದರು.
ತಾಪಂಡ ಹರ್ಷಿತ್ ಪೊನ್ನಪ್ಪ ಪ್ರಾರ್ಥಿಸಿ, ಕುಂಞÂರ ಸೋಮಯ್ಯ ಸ್ವಾಗತಿಸಿದರು. ಪಳಂಗAಡ ಸಬಿತಾ ನಿರೂಪಿಸಿದರು.
ನೂತನ ಆಡಳಿತ ಮಂಡಳಿ
ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಈ ತನಕ ಅಧ್ಯಕ್ಷರಾಗಿದ್ದ ರವಿ ಕುಂಞಪ್ಪ ಸ್ಥಾನ ತ್ಯಜಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಮೂವೆರ ಜಯರಾಂ, ಕಾರ್ಯದರ್ಶಿಯಾಗಿ ಬಟ್ಟೀರ ಮೇದಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಕಾಳೇಂಗಡ ಕಸ್ತೂರಿ ಮತ್ತಿತರರು ಪದಾಧಿಕಾರಿಗಳಾಗಿ ಆಯ್ಕೆ ಯಾಗಿದ್ದಾರೆ. ಈ ಹಿಂದೆ ಕೇರಿಯ ಮುಖ್ಯಸ್ಥ (ಕೊರವ್‌ಕಾರ)ರಾಗಿದ್ದ ಡಾ. ಕೋದಂಡ ದೇವಯ್ಯ ಅವರು ನಿಧನರಾದ ಹಿನ್ನೆಲೆಯಲ್ಲಿ ಮೇವಡ ನಾಣಯ್ಯ ಅವರನ್ನು ಮುಖ್ಯಸ್ಥರಾಗಿ ಹಾಗೂ ನಿರ್ಗಮಿತ ಅಧ್ಯಕ್ಷ ರವಿ ಕುಂಞಪ್ಪ ಅವರನ್ನು ಸಲಹೆಗಾರರಾಗಿ ನೇಮಿಸಲಾಯಿತು.