ಪಾಲಿಬೆಟ್ಟ, ಏ. ೯: ಪಾಲಿಬೆಟ್ಟ ಚೆಶೈರ್ ಹೋಮ್ ವಿಶೇಷ ಶಾಲೆಯಲ್ಲಿ ಸ್ವ ಉದ್ಯೋಗ ಕಲಿಕೆಗೆ ಕೈಮಗ್ಗ ಘಟಕವನ್ನು ಎಂಎಲ್ಸಿ ಸುಜಾ ಕುಶಾಲಪ್ಪ ಉದ್ಘಾಟಿಸಿದರು. ಸ್ವಉದ್ಯೋಗ ಕಲಿಕೆಗೆ ಸಹಕಾರಿಯಾಗಲಿರುವ ಕೈಮಗ್ಗ ಘಟಕವನ್ನು ಸ್ಥಾಪಿಸಿರುವ ವಿಶೇಷ ಶಾಲೆಯ ಆಡಳಿತ ಮಂಡಳಿಯ ಕಾಳಜಿಯನ್ನ ಶ್ಲಾಘಿಸಿದರು.
ವಿಶೇಷಚೇತನರ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಎಲ್ಲರಂತೆ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಗೀತಾ ಚಂಗಪ್ಪ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಖಜಾಂಚಿ ಡಾ. ಗಣಪತಿ, ಪ್ರಮುಖರಾದ ಪ್ರೀತು ಕುಶಾಲಪ್ಪ, ಮಾಳೇಟಿರ ಪವಿತ್ರ, ದೀಪಕ್ ಗಣಪತಿ,ವಸಂತ ಶಾಲಾ ಮುಖ್ಯ ಶಿಕ್ಷಕ ಶಿವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.