(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಏ. ೭: ಮಡಿಕೇರಿ ತಾಲೂಕಿಗೆ ಒಳಪಡುವ ನಾಲ್‌ನಾಡ್ ಎಂಬ ಐತಿಹ್ಯ ಹೊಂದಿರುವ ನಾಪೋಕ್ಲು ಹಾಗೂ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ನಾಪೋಕ್ಲು ಕೊಡವ ಸಮಾಜಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ...

೧೯೯೭ರಲ್ಲಿ ಆಗಿನ ಹಿರಿಯರು ಪ್ರಾರಂಭಿಸಿದ ಕೊಡವ ಸಮಾಜ ಇದೀಗ ೨೫ ವರ್ಷಗಳನ್ನು ಕಾಣುತ್ತಿದೆ. ಈ ಸಂದರ್ಭದಲ್ಲಿ ಸಮಾಜದ ಬೆಳ್ಳಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ಕೇವಲ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತಗೊಳಿಸದೆ ಈ ವ್ಯಾಪ್ತಿಯಲ್ಲಿ ಬರುವ ಕೊಡವ ಜನಾಂಗದವರ ಸೇವೆ-ಸಾಧನೆಗಳನ್ನು ಅದರಲ್ಲೂ ಪ್ರಮುಖವಾಗಿ ವೀರ ಪರಂಪರೆ-ಸೈನಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹಾಗೂ ಮುಂದಿನ ಪೀಳಿಗೆಗೂ ದಾಖಲೆಯಾಗಿರುವಂತಹ ರೀತಿಯ ಕಾರ್ಯಯೋಜನೆ ಹಾಗೂ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಮಾಜದ ಆಡಳಿತ ಮಂಡಳಿ ಉದ್ದೇಶಿಸಿದೆ.

ನಾಪೋಕ್ಲು ಹಾಗೂ ಸುತ್ತ ಮುತ್ತಲಿನ ೨೪ ಗ್ರಾಮಗಳು ಈ ಸಮಾಜದ ವ್ಯಾಪ್ತಿಗೆ ಒಳಪಡುತ್ತವೆ. ಕೊಡವ ಜನಾಂಗದಲ್ಲಿ ಪ್ರಸ್ತುತ ಇರುವ ಸುಮಾರು ೮೫೦ ಮನೆತನಗಳ ಪೈಕಿ ಈ ವ್ಯಾಪ್ತಿಯಲ್ಲಿಯೇ ೨೧೯ ಕುಟುಂಬಗಳು ಬರುತ್ತಿವೆ. ಎಲ್ಲಾ ಗ್ರಾಮಗಳ... ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಇದರ ಅಂಗವಾಗಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹಾಗೂ ಆಡಳಿತ ಮಂಡಳಿಯ ತಂಡ ಈಗಾಗಲೇ ಅಧ್ಯಯನ ನಡೆಸಿ ಹಲವಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ.

ಸೈನಿಕ ಪರಂಪರೆ-ಪ್ರತಿಮೆ ಸ್ಥಾಪನೆ

ಪ್ರಮುಖವಾಗಿ ನಾಲ್‌ನಾಡ್‌ವಿನ ಸೈನಿಕ ಇತಿಹಾಸವನ್ನು ಇಲ್ಲಿ ಪ್ರತಿಬಿಂಬಿಸುವ ಪ್ರಯತ್ನಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಇದರಂತೆ ದೇಶ ಕಂಡಿರುವ ಇಬ್ಬರು ಸೇನಾ ದಿಗ್ಗಜರುಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರುಗಳ ಕಂಚಿನ ಪ್ರತಿಮೆ ಹಾಗೂ ಯುದ್ಧ ಸ್ಮಾರಕವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ನಾಪೋಕ್ಲು ರಾಮಮಂದಿರ ಬಳಿಯ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ.

ವಿಶೇಷವೆಂದರೆ ಕೊಡಂದೇರ ಕುಟುಂಬಸ್ಥರಾದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರುಗಳು ಈ ಹಿಂದಿನ ಇತಿಹಾಸದಂತೆ ನಾಲ್‌ನಾಡ್ ಮೂಲದವರೇ ಆಗಿದ್ದರು ಎನ್ನುವುದು...

ಒಂದನೇ ಮಹಾಯುದ್ಧದಿಂದಲೇ ಇಲ್ಲಿನವರು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ೨೪ ಗ್ರಾಮಗಳಲ್ಲಿ ಸೈನಿಕರು ಹಾಗೂ ಅಧಿಕಾರಿಗಳು ಸೇರಿ ಈತನಕ ೧,೭೬೦ಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸಿದ್ದು, ಈಗಲೂ ಸಾಕಷ್ಟು ಮಂದಿ ಸೇನೆಯಲ್ಲಿದ್ದಾರೆ. ಸಮಾಜ ಇದೀಗ ನಡೆಸಿರುವ ಸಮೀಕ್ಷೆಯಂತೆ ಕೊಡವ ಜನಾಂಗದವರಾದ (ಈ ವ್ಯಾಪ್ತಿಗೆ ಒಳಪಡುವ) ಸೇನಾ ಸಿಬ್ಬಂದಿಗಳ ವಿವರ ಇಂತಿದೆ.

ಒAದನೇ ಮಹಾಯುದ್ಧದಲ್ಲಿ ಒಬ್ಬರು, ಎರಡನೇ ಮಹಾಯುದ್ಧದಲ್ಲಿ ೧೨ ಜನ, ಇಂಡೋ-ಪಾಕ್ ಕದನದಲ್ಲಿ ೮ ಜನ, ಬಾಂಗ್ಲಾ ಕದನದಲ್ಲಿ ೨ ಮಂದಿ ಹಾಗೂ ಚೈನಾ ಸಮರದಲ್ಲಿ ಒಬ್ಬರು ಭಾಗಿಯಾಗಿದ್ದಾರೆ.

ಅಧಿಕಾರಿಗಳಿಂದ... ಸೈನಿಕರ ತನಕ

ಕಾರ್ಯಪ್ಪ-ತಿಮ್ಮಯ್ಯ ಅವರನ್ನು ಹೊರತಾಗಿಸಿ ಮೂವರು ಲೆಫ್ಟಿನೆಂಟ್ ಜನರಲ್ ಹುದ್ದೆ ಅಲಂಕರಿಸಿದ್ದಾರೆ. ೭ ಮಂದಿ ಮೇಜರ್ ಜನರಲ್‌ಗಳಾಗಿ, ನಾಲ್ವರು ಬ್ರಿಗೇಡಿಯರ್‌ಗಳಾಗಿ, ೩೨ ಮಂದಿ ಕರ್ನಲ್ಸ್, ೧೬ ಮಂದಿ ಲೆಫ್ಟಿನೆಂಟ್ ಕರ್ನಲ್ಸ್, ೧೩ ಮೇಜರ್‌ಗಳು, ೨೬ ಜನ ಕ್ಯಾಪ್ಟನ್, ಹಾನರರಿ ಕ್ಯಾಪ್ಟನ್ ಆಗಿ ೫ ಮಂದಿ, ಸುಬೇದಾರ್ ಮೇಜರ್ ಆಗಿ ೨೧, ವಿಂಗ್ ಕಮಾಂಡರ್ ಆಗಿ ಮೂವರು, ಲೆಫ್ಟಿನೆಂಟ್ ಕಮಾಂಡರ್ ಆಗಿ ಮೂವರು ಸೇರಿದಂತೆ ಹಲವಷ್ಟು ಮಂದಿ ಜೂನಿಯರ್ ಕಮೀಷನ್ಡ್ ಆಫೀರ‍್ಸ್ (ಎ.ಅ.ಔ)ಗಳಾಗಿ ಕರ್ತವ್ಯ ನಿಭಾಯಿಸಿದ್ದಾರೆ.

ಶ್ರೀಲಂಕಾ-ದಕ್ಷಿಣ ಆಫ್ರಿಕಾ ಶಾಂತಿ ಪಾಲನಾ ಪಡೆಯಲ್ಲಿ ಮೂವರು ಕಾರ್ಯನಿರ್ವಹಿಸಿದ್ದಾರೆ. ಹಲವು ಮಂದಿಗೆ ಎ.ವಿ.ಎಸ್.ಎಂ., ವಿ.ಎಸ್.ಎಂ., ಎಸ್.ಎಂ. ಪದಕಗಳು ಲಭಿಸಿವೆ. (ಮೊದಲ ಪುಟದಿಂದ) ಆಪರೇಷನ್ ರಕ್ಷಕ್‌ನಲ್ಲಿ ಒಬ್ಬರು ಭಾಗಿಯಾಗಿದ್ದರೆ, ಒಬ್ಬರಿಗೆ ಕಾರ್ಗಿಲ್ ಪರಾಕ್ರಮ ಚಕ್ರ, ಇಬ್ಬರಿಗೆ ವೀರಚಕ್ರ, ತಲಾ ಒಬ್ಬರಿಗೆ ಶೌರ್ಯಚಕ್ರ ಹಾಗೂ ಗ್ಯಾಲಂಟರಿ ಅವಾರ್ಡ್ ಬಂದಿದೆ. ಒಬ್ಬರು ವೀರ ಮರಣವನ್ನಪ್ಪಿದ್ದಾರೆ ಎಂಬುದು ಈ ವ್ಯಾಪ್ತಿಯ ಕೊಡವ ಜನಾಂಗದವರ ಐತಿಹ್ಯವಾಗಿದೆ.

ಈ ಹಿರಿಮೆಯನ್ನು ಪರಿಗಣಿಸಿ ಸೇನೆಗೆ ಗೌರವ ನೀಡುವುದು ಹಾಗೂ ರಾಷ್ಟಿçÃಯತೆಯ ಭಾವನೆಯನ್ನು ಯುವ ಜನತೆಯಲ್ಲಿ ಮೂಡಿಸಲು ಪ್ರಮುಖರ ಪ್ರತಿಮೆ ಹಾಗೂ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ನಂತರದಲ್ಲಿ ಸಮಾಜದ ಮೂಲಕ ನಿರ್ವಹಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಮಾಹಿತಿ ನೀಡಿದ್ದಾರೆ.

ಇದಲ್ಲದೆ...

ಈ ಭಾಗದ ಇನ್ನಷ್ಟು ಮಂದಿ ಈ ಹಿಂದೆ ಕೊಡಗು ದೇಶವಾಗಿದ್ದ

ಸಂದರ್ಭದಲ್ಲಿ ಪಡೆಬೀರರುಗಳಾಗಿ (ಹೋರಾಟಗಾರರಾಗಿ) ಗುರುತಿಸಲ್ಪಟ್ಟಿದ್ದಾರೆ. ವಿಶೇಷವಾಗಿ ವೀರತ್ವ ತೋರಿರುವ ಹೈದರಾಲಿ-ಟಿಪ್ಪು ವಿರುದ್ಧ ಹೋರಾಡಿದ ಖ್ಯಾತಿ ಹೊಂದಿರುವ ಪ್ರಮುಖರಾದ ದಳವಾಯಿ ಹಾಗೂ ಸೇನಾ ಮುಖ್ಯಸ್ಥರಾದ ಕನ್ನಂಡ ದೊಡ್ಡಯ್ಯ, ಅಪ್ಪಚ್ಚೀರ ಮಂದಣ್ಣ ಹಾಗೂ ಕುಲ್ಲೇಟಿರ ಪೊನ್ನಣ್ಣ ಅವರುಗಳ ಪುತ್ಥಳಿಯನ್ನು ಸಮಾಜದ ಆವರಣದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರಾಗಿರುವ ಸಾಹಿತಿ ಹರದಾಸ ಅಪ್ಪಚ್ಚ ಕವಿ ಅವರ ಪ್ರತಿಮೆ ಯನ್ನೂ ಪ್ರತಿಷ್ಠಾಪಿಸಲಾಗುವುದು. ಪ್ರಸ್ತುತ ಇವರ ಹೆಸರಿನಲ್ಲಿ ಸಭಾಂಗಣ ಇರುವುದಾಗಿ ಮನು ಮುತ್ತಪ್ಪ ವಿವರವಿತ್ತರು.

ಈಗಾಗಲೇ ಈ ಕುರಿತಾದ ಸಿದ್ಧತೆಗಳು-ಸಭೆಗಳು ನಡೆಯುತ್ತಿವೆ. ಪ್ರತಿಮೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಕಾರ್ಯಕ್ರಮಕ್ಕೆ ಸುಮಾರು ಒಂದೂವರೆಯಿAದ ಎರಡು ಕೋಟಿಯಷ್ಟು ವೆಚ್ಚ ತಗುಲಲಿದ್ದು, ದಾನಿಗಳಿಂದ ಸಂಗ್ರಹಿಸಲಾಗುವುದು. ಪ್ರತಿಮೆಗಳ ಕಾರ್ಯಯೋಜನೆ ಪೂರ್ಣಗೊಂಡ ಬಳಿಕ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗುವುದು. ಬೆಳ್ಳಿ ಹಬ್ಬ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಾಟಂಡ ಎ. ಮುತ್ತಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದ್ದು, ಅಧ್ಯಕ್ಷರಾಗಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಕಾರ್ಯನಿರ್ವಹಿಸಲಿದ್ದಾರೆ ಎಂದು ಮನು ಮುತ್ತಪ್ಪ ತಿಳಿಸಿದರು.

ಬೆಳ್ಳಿ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಉತ್ಸವ, ಅಂತರ ಗ್ರಾಮ ಸಾಂಸ್ಕೃತಿಕ ಸ್ಪರ್ಧೆ, ಅಂತರ ಕೊಡವ ಸಮಾಜ ಹಾಕಿ ಪದ್ಯಾವಳಿಯನ್ನು ನಡೆಸಲಾಗುವುದು. ಒಂದು ವಾರದ ಕಾರ್ಯಕ್ರಮಕ್ಕೆ ಚಿಂತನೆಯಿದ್ದು, ಸದಸ್ಯತ್ವ ಆಂದೋಲನವನ್ನು ನಡೆಸಲಾಗುವುದು. ಪ್ರಸ್ತುತ ೩೫೦೦ರಷ್ಟು ಸದಸ್ಯರಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.