ಮಡಿಕೇರಿ, ಏ. ೭ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನ ಬೋಧಕ ಆಸ್ಪತ್ರೆಗೆ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ (ISಖಔ) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಆಂಟ್ರಿಕ್ಸ್ ಕಾರ್ಪೋರೇಶನ್ ಅವರು ಸಿಎಸ್‌ಆರ್ ನಿಧಿ ಅಡಿಯಲ್ಲಿರೂ. ೭೫ ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ಒದಗಿಸಿದೆ.ಆಂಟ್ರಿಕ್ಸ್ ಕಾರ್ಪೋರೇಶನ್ ಲಿ., ಸಂಸ್ಥೆಯ ಸಿಎಸ್‌ಆರ್ ಸಮಿತಿಯ ಅಧ್ಯಕ್ಷ ಡಾ. ಅಜಿತ್ ಕಲಘಟಗಿ ಹಾಗೂ ವ್ಯವಸ್ಥಾಪಕರು ಹಾಗೂ ಸಂಯೋಜಕ ರವೀಂದ್ರ ಎಚ್.ಎಸ್. ಖುದ್ದು ಭೇಟಿ ನೀಡಿ ಕೊಡುಗೆ ನೀಡಿದ ಉಪಕರಣಗಳ ವಿವರದ ಪತ್ರವನ್ನು ಕೊಡಗು

(ಮೊದಲ ಪುಟದಿಂದ) ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕಾರ್ಯಪ್ಪ ಕೆ.ಬಿ ಅವರಿಗೆ ಹಸ್ತಾಂತರಿಸಿ ತಮ್ಮ ಸಂಸ್ಥೆಯಿAದ ನೀಡಿದ ವೈದ್ಯಕೀಯ ಉಪಕರಣ ಗಳನ್ನು ಸಾರ್ವಜನಿಕರ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳು ವಂತೆ ಸಲಹೆ ನೀಡಿದರು.

ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕೆ.ಬಿ.ಕಾರ್ಯಪ್ಪ ಅವರು ಆಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯವರು ಸಂಸ್ಥೆಯ ವಿವಿಧ ವಿಭಾಗಗಳಿಗೆ ಚಿಕಿತ್ಸೆಗಾಗಿ ಒದಗಿಸಿದ ವೈದ್ಯಕೀಯ ಉಪಕರಣಗಳಾದ ಅನಸ್ಥೇಶಿಯಾ ವರ್ಕ್ಸ್ ಸ್ಟೇಶನ್, ಗ್ಲೋಕೋಮ ಸ್ಕಿçÃನಿಂಗ್ ಚಿಕಿತ್ಸೆಗಾಗಿ ವಿಶುವಲ್ ಫೀಲ್ಡ್ ಅನಲೈಸರ್ ಉಪಕರಣ, ದಂತ ಚಿಕಿತ್ಸಾ ವಿಭಾಗಕ್ಕೆ ಎರಡು ಡೆಂಟಲ್ ಚೇರ್ ಮತ್ತು ಕ್ಷ-ಕಿರಣ ಯಂತ್ರ, ಮನೋವೈದ್ಯ ಶಾಸ್ತç ವಿಭಾಗಕ್ಕೆ ಇಸಿಟಿ ಉಪಕರಣ, ಮೆಡಿಸನ್ ವಿಭಾಗಕ್ಕೆ ಟಿಎಂಟಿ ಉಪಕರಣ, ಸ್ತಿçà ಮತ್ತು ಪ್ರಸೂತಿ ವಿಭಾಗಕ್ಕೆ ಎನ್‌ಎಸ್‌ಟಿ ಉಪಕರಣ ಮತ್ತು ಶಸ್ತçಚಿಕಿತ್ಸೆಗೆ ಬಳಸುವ ಹಾರ್ಮೋನಿಕ್ ಸ್ಕಾಲ್ಪಲ್ ಉಪಕರಣಗಳನ್ನು ಒದಗಿಸಲಾಗಿದ್ದು, ಆಸ್ಪತ್ರೆಗೆ ವಿವಿಧ ಚಿಕಿತ್ಸೆಗೆ ಆಗಮಿಸುವ ಸಾರ್ವಜನಿಕರಿಗೆ ಚಿಕಿತ್ಸೆಯನ್ನು ನೀಡಲು ಬಳಸಿಕೊಳ್ಳುವುದಾಗಿ ತಿಳಿಸಿದರು.