ಗೋಣಿಕೊಪ್ಪಲು, ಏ.೭: ದಕ್ಷಿಣ ಕೊಡಗಿನಲ್ಲಿ ಬೀಡುಬಿಟ್ಟಿರುವ ಹುಲಿಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು ೧೦ನೇ ದಿನಕ್ಕೆ ಕಾಲಿಟ್ಟಿದೆ.
ಇದೀಗ ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆ ಬಳಿ ಹುಲಿಯು ಸಂಚಾರ ಮಾಡಿರುವ ಬಗ್ಗೆ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ.
ಇದನ್ನು ಗಮನಿಸಿದ ಕಾರ್ಯಾಚರಣೆ ತಂಡ ಮತ್ತೆ ರುದ್ರÀ್ರಗುಪ್ಪೆ ಬಳಿ ತೆರಳಿ ಪರಿಶೀಲನೆ ನಡೆಸಿದೆ. ಕಳೆದ ಹತ್ತು ದಿನಗಳಿಂದ ಕಾರ್ಯಾ ಚರಣೆ ನಡೆಸುತ್ತಿರುವ ಕಾರ್ಯಾಚರಣೆ ತಂಡಕ್ಕೆ ಹಲವು ದಿನಗಳಿಂದ ಹುಲಿಯ ಚಲನವಲ ನಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಇದರಿಂದಾಗಿ ಹುಲಿಯು ಮತ್ತೆ ಅರಣ್ಯ ಪ್ರದೇಶದತ್ತ ಮುಖ ಮಾಡಿರ ಬಹುದೆಂದು ಅಂದಾಜು ಮಾಡಲಾಗಿತ್ತು.
ಇದೀಗ ಗುರುವಾರ ಮುಂಜಾನೆಯ ವೇಳೆ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡಕ್ಕೆ ರುದ್ರÀ್ರಗುಪ್ಪೆ ಬಳಿ ಹುಲಿಯ ಹೆಜ್ಜೆ ಗುರುತು ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಕಾರ್ಯಾಚರಣೆ ಮುಂದು ವರಿಸಿದ್ದಾರೆ.
ಕುಟ್ಟಂದಿ, ಬಿ.ಶೆಟ್ಟಿಗೇರಿ ಹಾಗೂ ಕುಂದ ಗ್ರಾಮದಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಹುಲಿಯ ಚಲನವಲನಗಳ ಬಗ್ಗೆ ಯಾವುದೇ ಚಿತ್ರ ಸೆರೆ ಆಗಿರಲಿಲ್ಲ. ಸಾಕಾನೆಗಳಾದ ಶ್ರೀಕಂಠ ಮಹೇಂದ್ರ ಹಾಗೂ ಭೀಮಾ ಸಹಾಯ ದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.
ಇಲಾಖೆಯ ಡಿಎಫ್ಓ ಚಕ್ರಪಾಣಿ, ಶಿವರಾಂ ಬಾಬು, ಎ.ಟಿ. ಪೂವಯ್ಯ, ಎಸಿಎಫ್ ಉತ್ತಪ್ಪ, ಆರ್.ಎಫ್.ಓ. ಅಶೋಕ್ ಹುನಗುಂದ, ದಿವಾಕರ್ ಹಾಗೂ ಸಿಬ್ಬಂದಿಗಳು ಶೋಧ ಕಾರ್ಯಾðಚರಣೆ ವೀಕ್ಷಿಸಿದರು.