ಸಿದ್ದಾಪುರ, ಏ. ೭: ತಾ. ೧೦ ರಿಂದ ತಾ. ೧೨ರ ತನಕ ಕರಡಿಗೋಡು ಶ್ರೀ ಬಸವೇಶ್ವರ ದೇವರ ವಾರ್ಷಿಕ ಉತ್ಸವವನ್ನು ಬಿಳಿಗೇರಿಯ ಉದಯ ಕುಮಾರ್ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ತಾ. ೧೦ ರಂದು ರಾತ್ರಿ ೭.೩೦ ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಸ್ಥಾನಕ್ಕೆ ತರುವುದು. ತಾ. ೧೧ ರಂದು ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹೋಮ, ೧೦ಕ್ಕೆ ಕಲಶ ಪೂಜೆ, ೧೧ಕ್ಕೆ ಗಂಗಾ ಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ೧೨.೩೦ ಕ್ಕೆ ಮಹಾಪೂಜೆ, ತೀರ್ಥಪ್ರಸಾದ ನಂತರ ಅನ್ನಸಂತರ್ಪಣೆ. ಅಪರಾಹ್ನ ೩.೩೦ ಕ್ಕೆ ದೇವರ ಮನೆ ಮೆರವಣಿಗೆ ನಂತರ ಸಂಜೆ ೭ ಗಂಟೆಯಿAದ ಕೊಂಡ ಪೂಜೆ.
ತಾ. ೧೨ ರಂದು ಬೆಳಿಗ್ಗೆ ೮ ಗಂಟೆಗೆ ರುದ್ರಪಾರಾಯಣ, ಬೆಳಿಗ್ಗೆ ೧೦ ಗಂಟೆಗೆ ದೇವತಾಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡಸೇವೆ, ಮಹಾಪೂಜೆ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ, ಅನ್ನಸಂತರ್ಪಣೆ ನಂತರ ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.