ವೀರಾಜಪೇಟೆ, ಏ. ೭: ಕರ್ನಾಟಕ ಜಾನಪದ ಪರಿಷತ್ನ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ತಾ. ೯ ರಂದು ಅಪರಾಹ್ನ ೨ ಗಂಟೆಗೆ ಸೆರೆನಿಟಿ ಹಾಲ್ನಲ್ಲಿ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ನಾ ಕನ್ನಡಿಗ ಟಾಮಿ ಥಾಮಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಜನರು ಪಾಶ್ಚತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದು ಹಿಂದಿನ ಜಾನಪದ ಹಾಗೂ ಜನಪದ ಕಲೆಗಳನ್ನು ಸಂರಕ್ಷಿಸುವ ಹಾಗೂ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶನ ಕಾರ್ಯಕ್ರಮ ಮಾಡಲಾಗುತ್ತಿದೆ. ಅಂದು ಅಪರಾಹ್ನ ೧ ಗಂಟೆಯಿAದ ೨ ಗಂಟೆಯವರೆಗೆ ಮುಕ್ತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಸ್ವರಾರ್ಣವ ಸಂಗೀತ ಶಾಲಾ ಪ್ರಧಾನ ವ್ಯವಸ್ಥಾಪಕ ದಿಲಿಕುಮಾರ್ ಮಾತನಾಡಿ, ವಿವಿಧ ಪ್ರಕಾರಗಳ ಜಾನಪದ ಕಲೆಗಳಾದ ಜಾನಪದ ಗೀತೆಗಳು, ಕಂಸಾಳೆ ಪದಗಳು, ಜಾನಪದ ನೃತ್ಯ ಪ್ರದರ್ಶನ, ಚಂಡೆವಾದ್ಯ, ಡೋಲುಪಾಟ್, ಕೊಂಬ್ಕೊಟ್ಟ್ ವಾಲಗ, ಉರುಟ್ಟಿಕೊಟ್ಟ್ ಪಾಟ್ ಇತ್ಯಾದಿ ಕಲಾ ಪ್ರಕಾರಗಳು ನಡೆಯಲಿವೆ ಎಂದು ಹೇಳಿದರು.
ಖಜಾಂಚಿ ಧ್ರುವ ಮಾತಾನಾಡಿ, ಅಂದು ಸಂಜೆ ೬ ಗಂಟೆಗೆ ಬೆಂಗಳೂರಿನ ಕೈವಲ್ಯ ಕಲಾಕೇಂದ್ರದ ಸುಧ ಅಡುಕುಳ ಅವರ ರಚನೆಯ ಸ್ತಿçà ಶೋಷಣೆಯ ಬಗ್ಗೆ ಬಿಂಬಿಸುವ ಮಾಧವಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರದರ್ಶನ ಉಚಿತವಾಗಿದ್ದು ಕಲಾಭಿಮಾನಿಗಳು ಸಹಕಾರ ನೀಡುವಂತೆ ಕೋರಿದರು.
ಗೋಷ್ಠಿಯಲ್ಲಿ ನಿರ್ದೇಕರುಗಳಾದ ಮನೇಯಪಂಡ ದೇಚಮ್ಮ ಕಾಳಪ್ಪ, ಟಿ.ಡಿ ಮೋಹನ್, ವಕೀಲ ಟಿ.ಎಚ್ ಪ್ರದೀಪ್ ಉಪಸ್ಥಿತರಿದ್ದರು.