ಮಡಿಕೇರಿ, ಏ. ೭: ಕಟ್ಟೆಮಾಡಿನ ಗ್ರೀನ್ಸ್ ಯುವಕ ಸಂಘದ ವತಿಯಿಂದ ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕಟ್ಟೆಮಾಡು ಪ್ರೀಮಿಯರ್ ಲೀಗ್ ಸೀಸನ್ -೧ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೭ ತಂಡಗಳು ಪಾಲ್ಗೊಂಡಿದ್ದವು. ವಿಜಯ್ ಮಾಲೀಕತ್ವದ ಟೀಮ್ ಹಂಟರ್ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ನಂದೇಟಿರ ಜೋಯಪ್ಪ ಮಾಲೀಕತ್ವದ ಬ್ಲಾö್ಯಕ್ ಈಗಲ್ಸ್ ತಂಡ ಪಡೆದುಕೊಂಡಿತು. ಕಟ್ಟೆಮನೆ ರೋಶನ್ ಮಾಲೀಕತ್ವದ ಟೀಮ್ ಅಜ್ಜಿಬಾಣೆ ತೃತೀಯ ಸ್ಥಾನ ಪಡೆದರೆ, ಪರ್ಲಕೋಟಿ ಸತ್ಯ, ಕಟ್ಟೆಮನೆ ರಾಕೇಶ್, ಬಳಪದ ಅಯ್ಯಪ್ಪ ಮಾಲೀಕತ್ವದ ಬ್ಲೂಸ್ಟಾರ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಫೈನಲ್ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು.
ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಹೇಮಂತ್ ಪೂಜಾರಿ (ಟೀಮ್ ಹಂಟರ್), ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಅಜ್ಜಿಬಾಣೆ ತಂಡದ ಕಟ್ಟೆಮನೆ ರೋಶನ್, ಉತ್ತಮ ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಸುಜಯ್ ಪೂಜಾರಿ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಲಿಖಿತ್ ಎಂ.ಜಿ. ಪಡೆದರು.