ವೀರಾಜಪೇಟೆ, ಏ. ೭: ವಯೋ ಸಹಜ ಕಾಯಿಲೆಗಳಿಂದ ಬೇಸತ್ತು ವೃದ್ಧರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ಪಾಲಂಗಾಲ ಗ್ರಾಮದಲ್ಲಿ ನಡದಿದೆ.

ಪಾಲಂಗಾಲ ನಿವಾಸಿ ಕರಿನೆರವಂಡ ಡಿ. ಅಯ್ಯಪ್ಪ (೬೯) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೃತರಿಗೆ ಮೂರು ವರ್ಷಗಳ ಹಿಂದೆ ಹೃದಯ ಸಂಬAಧಿತ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು ಅಲ್ಲದೆ ಕಳೆದ ನಾಲ್ಕು ತಿಂಗಳ ಹಿಂದೆ ಗಂಟಲು ಕ್ಯಾನ್ಸರ್‌ನಿಂದ ಬಳಲುತಿದ್ದರು ಎನ್ನಲಾಗಿದೆ. ಕಾಯಿಲೆಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು.