ಗೋಣಿಕೊಪ್ಪ ವರದಿ, ಏ. ೭: ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ನಿಟ್ಟೂರು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೃಷಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನಾ ಚೆಂಗಪ್ಪ ಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿ, ಅರಣ್ಯ ಸಂಪನ್ಮೂಲ ಪೋಷಣೆಯಿಂದ ಮಾತ್ರ ಹವಾಮಾನ ವೈಪರೀತ್ಯ ನಿಯಂತ್ರಣ ಸಾಧ್ಯ. ಶೇ. ೩೪ ರಷ್ಟು ಅರಣ್ಯ ಇರಬೇಕಾಗಿದ್ದು, ರಾಜ್ಯದಲ್ಲಿ ಶೇ. ೨೧ ರಷ್ಟು ಮಾತ್ರ ಅರಣ್ಯವಿದೆ. ಇದು ಅಪಾಯದ ಮುನ್ಸೂಚನೆಯಾಗಿರುವುದರಿಂದ ಈ ಬಗ್ಗೆ ಜಾಗೃತರಾಗಬೇಕು. ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಜಲಮೂಲ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞರಂಡ ಕವಿತ ಪ್ರಭು, ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ಪಕ್ಷದ ಪ್ರಮುಖರಾದ ರಾಜು, ಹರೀಶ್ ಇದ್ದರು.