ಮಡಿಕೇರಿ, ಏ. ೬: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆಯಲಿರುವ ೧೨ನೇ ಹಾಕಿ ಇಂಡಿಯಾ ಸೀನಿಯರ್ ಮೆನ್ ರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಹಲವರು ಸ್ಥಾನ ಪಡೆದಿದ್ದಾರೆ. ತಂಡದ ಆಟಗಾರರಾಗಿ ಶರತ್ ಸೋಮಣ್ಣ ಕೆ.ಪಿ., ಮುಕ್ಕಾಟಿರ ಆರ್. ಮುತ್ತಣ್ಣ, ನಾಚಪ್ಪ ಐ.ಆರ್., ಚೆಲ್ಸ ಮೇದಪ್ಪ ಬಿ.ಎನ್., ಲಿಖಿತ್ ಬಿ.ಎಂ., ಸೋಮಣ್ಣ ಬಿ.ಪಿ., ಸೂರ್ಯ ಎನ್.ಎಂ., ಚಿರಂತ್ ಸೋಮಣ್ಣ ಎಂ.ಡಿ. ಹಾಗೂ ಶವಾಂತ್ ಸಿ.ಎಸ್. ಆಯ್ಕೆಯಾಗಿದ್ದಾರೆ. ತಂಡದ ಕೋಚ್ ಹಾಗೂ ವ್ಯವಸ್ಥಾಪಕರಾಗಿ ಜಿಲ್ಲೆಯವರಾದ ಕೂತಂಡ ಪೂಣಚ್ಚ ಹಾಗೂ ಕರ್ತಮಾಡ ರಿಕ್ಕಿ ಗಣಪತಿ ಇರಲಿದ್ದಾರೆ.