ಮಡಿಕೇರಿ, ಏ. ೬: ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ವಾರ್ಷಿಕೋತ್ಸವ ತಾ. ೯, ೧೦ ಹಾಗೂ ೧೧ ರಂದು ನಡೆಯಲಿದೆ.

ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ತಾ. ೯ ರಂದು ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೬ ಗಂಟೆಯಿAದ ೭.೩೦ ರ ತನಕ ಗಣಪತಿ ಹೋಮ, ಬೆಳಿಗ್ಗೆ ೮ ರಿಂದ ೯ ರತನಕ ಏಕದಶ ರುದ್ರಾಭಿಷೇಕ, ಬೆಳಿಗ್ಗೆ ೯ ರಿಂದ ೧೦.೩೦ರ ತನಕ ನವಕ ಮತ್ತು ೧೦೮ ಕಳಶಾಭಿಷೇಕ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೦ ರಂದು ಬೆಳಿಗ್ಗೆ ೬ ಗಂಟೆಯಿAದ ೭.೩೦ ರ ತನಕ ಗಣಪತಿ ಹೋಮ, ಬೆಳಿಗ್ಗೆ ೮ ರಿಂದ ೯ರ ತನಕ ದಾರಾಭಿಷೇಕ ಮತ್ತು ಕ್ಷೀರಾಭಿಷೇಕ, ಬೆಳಿಗ್ಗೆ ೯ ರಿಂದ ೧೦.೩೦ರ ತನಕ ನವಕ ಮತ್ತು ೧೦೮ ಕಳಶಾಭಿಷೇಕ, ಅಂದು ತಲಕಾವೇರಿಯಲ್ಲಿ ಬೆಳಿಗ್ಗೆ ೯ ಗಂಟೆಯಿAದ ಗಣಪತಿಹೋಮ, ಕಳಶಾಭಿಷೇಕ, ಪಂಚಗವ್ಯ, ೧೦೮ ಕಳಶಾಭಿಷೇಕ ನೆರವೇರಲಿದೆ.

ತಾ. ೧೧ ರಂದು ಬೆಳಿಗ್ಗೆ ೬ ಗಂಟೆಯಿAದ ೭.೩೦ ರ ತನಕ ಗಣಪತಿ ಹೋಮ, ಬೆಳಿಗ್ಗೆ ೮ ರಿಂದ ೯ರ ತನಕ ಪವಮಾನಾಭಿಷೇಕ, ಬೆಳಿಗ್ಗೆ ೯ ರಿಂದ ೧೦.೩೦ರ ತನಕ ನವಕ ಮತ್ತು ೧೦೮ ಕಳಶಾಭಿಷೇಕ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.