ಮಡಿಕೇರಿ, ಏ. ೭: ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ನಡೆದ ರಾಜ್ಯ ಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದಲ್ಲಿ ಕೃಷಿ ಇಲಾಖೆಯ ವತಿಯಿಂದ ಸಾವಯವ ಕೃಷಿ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರಲ್ಲಿ ರಾಜ್ಯದ ಹಲವು ಜಿಲ್ಲೆಗಳ ಆರು ಸಾವಯವ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಪೈಕಿ ಮಡಿಕೇರಿ ತಾಲೂಕಿನ, ಹೆರವನಾಡು ಗ್ರಾಮದ, ಬೆಟ್ಟಗೇರಿ ಗ್ರಾಮ ಪಂಚಾಯಿತಿಯ, ಅಪ್ಪಂಗಳದ, ಸಾವಯವ ಕ್ರಿಯಾಶೀಲ ರೈತರಾದ ನಾಪಂಡ ಸುಮಿತ್ರ ಅವರಿಗೆ ‘ಸಾವಯವ ಸಿರಿ ಚೇತನ' ಪ್ರಶಸ್ತಿ ಲಭಿಸಿದ್ದು, ಇವರನ್ನು ಜೈ ಹನುಮಾನ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಪಂಡ ಸದಾಶಿವ, ಸಂಘದ ಸದಸ್ಯರುಗಳು, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಪೂಜಾರಿ, ಪಪ್ಪಿ ಪ್ಲಾಂಟೇಶನ್ ಮಾಲೀಕ ವಸಂತ್ ಹಾಜರಿದ್ದು, ಶುಭ ಹಾರೈಸಿದರು.