ಮಡಿಕೇರಿ, ಏ. ೬: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂ.ಟಿ.ವಿ. ಅವರ ರೋಡೀಸ್ ರಿಯಾಲಿಟಿ ಶೋಗೆ ಕೊಡಗಿನ ಜಸ್ವಂತ್ ಬೋಪಣ್ಣ ಆಯ್ಕೆಯಾಗಿದ್ದಾರೆ. ಇದು ರಾಷ್ಟçಮಟ್ಟದ ಅತೀ ದೊಡ್ಡ ಸ್ಪರ್ಧೆಯಾಗಿದ್ದು, ಇವರು ಫೈನಲ್ ತಲುಪಿದ್ದಾರೆ. ಅಂತಿಮ ಹಂತದÀ ಸ್ಪರ್ಧೆಯಲ್ಲಿ ಮೆಂಟಲ್ ಟಾಸ್ಕ್, ಫಿಸಿಕಲ್ ಟಾಸ್ಕ್, ಬೈಕ್ ರೈಡಿಂಗ್, ಶೋಕೇಸ್ ಸೇರಿದಂತೆ ವಿವಿಧ ತರಹದ ಸ್ಪರ್ಧೆಗಳಿದ್ದು, ಇದರ ಪ್ರಸಾರವು ತಾ. ೮ ರಿಂದ ೧೦ ರವರೆಗೆ ಸಂಜೆ ೭ ಗಂಟೆಗೆ ಎಂ.ಟಿ.ವಿ. ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಜಸ್ವಂತ್ ಬೋಪಣ್ಣ ಅವರು ನಾಪೋಕ್ಲು ಗ್ರಾಮದ ಬಾಳೆಯಡ ಸತೀಶ್ ಕುಮಾರ್-ಬಿಂದು ದಂಪತಿಗಳ ಪುತ್ರ.