ಸೋಮವಾರಪೇಟೆ, ಏ. ೬: ಜೈ ಜವಾನ್ ಮಾಜಿ ಸೈನಿಕರ ಸಂಘದ ೮ನೇ ವರ್ಷದ ಸಂತೋಷಕೂಟ ಸಮಾರಂಭ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಜಿ. ಬಸಪ್ಪ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಬಿ.ಕೆ. ಅಣ್ಣಯ್ಯ ಹಾಗೂ ನಿವೃತ್ತ ಮೇಜರ್ ಎಂ.ಕೆ. ಮಂದಪ್ಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ವಹಿಸಲಿದ್ದು, ಸಂಘದ ಸದಸ್ಯರಾದ ಎನ್.ಯು. ಚಂದ್ರಕುಮಾರ್, ಹೆಚ್.ಓ. ಬೋಪಯ್ಯ, ಎನ್.ಟಿ. ಪುಟ್ಟಪ್ಪ, ಡಿ.ಎನ್. ಬೋಜಮ್ಮ ಹಾಗೂ ಎಂ.ಡಿ. ಸೀತಮ್ಮ ಅವರುಗಳನ್ನು ಸನ್ಮಾನಿಸಲಾಗುವುದು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಗುವುದು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ತಾ. ೧೧ ರೊಳಗೆ ಸಂಘದ ಕಚೇರಿಗೆ ಅಂಕಪಟ್ಟಿಯನ್ನು ತಲುಪಿಸುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೪೮೩೩೩೨೯೩೪ ಸಂಪರ್ಕಿಸಬಹುದಾಗಿದೆ.