ಮಡಿಕೇರಿ, ಏ. ೬: ಹೊದ್ದೂರು ಪಾಲೆಮಾಡುವಿನಲ್ಲಿ ನಿರ್ಮಾಣ ವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಮುಖ್ಯಸ್ಥರಾಗಿರುವ ಬ್ರಿಜೇಶ್ ಪಟೇಲ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದ ಅವರು, ಜಾಗದ ಪರಿಶೀಲನೆ ಹಾಗೂ ಬಳಿಕ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಎಲ್ಲಾ ಸಹಕಾರ ಬೇಕಿದೆ. ಯಾವುದೇ ಅಡೆ-ತಡೆಗಳಿಲ್ಲದಂತೆ ಪ್ರೋತ್ಸಾಹ ದೊರೆತಲ್ಲಿ ಶೀಘ್ರವಾಗಿ ಹಣ ಹೂಡಿಕೆ ಮಾಡಿ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು. ಅಂರ‍್ರಾಷ್ಟಿçÃಯ ಗುಣಮಟ್ಟದ ಮಾದರಿಯ ಸ್ಟೇಡಿಯಂ ಇದಾಗಿರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇದು ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕೆ.ಎಸ್.ಸಿ.ಎ.ಯ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಮತ್ತಿತರರು ಜೊತೆಗಿದ್ದರು. ಬ್ರಿಜೇಶ್ ಪಟೇಲ್ ಅವರು ಸದ್ಯದಲ್ಲಿ ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ವೇಳೆ ಇದರ ಬಗ್ಗೆ ಕೂಲಂಕುಶವಾಗಿ ಸಮಾಲೋಚನೆ ನಡೆಸಲಿದ್ದಾರೆ.