ಮಡಿಕೇರಿ, ಏ. ೬: ಸುಡುಬಿಸಿಲು ತಾಳಲಾರದೆ ಮೂಕ ರೋಧನ ಅನುಭವಿಸುತ್ತಿರುವ ಈ ತಾಯಿ ಮತ್ತು ಕಂದಮ್ಮ ರಕ್ಷಣೆಗಾಗಿ ಎದುರು ನೋಡುತ್ತಿದೆ. ಸೂರಿಲ್ಲದೆ, ಕುಡಿಯಲು ನೀರಿಲ್ಲದೆ ಬಸವಳಿದಿದೆ.

ಈ ಕರುಣಾಜನಕ ದೃಶ್ಯ ಕಂಡು ಬಂದಿದ್ದು ನಗರದ ಸರಕಾರಿ ಆಸ್ಪತ್ರೆ ಬಳಿಯಲ್ಲಿ. ಹಸುವೊಂದು ಮಂಗಳವಾರ ರಾತ್ರಿ ಕರುವಿಗೆ ಜನ್ಮ ನೀಡಿದೆ. ನೋವಿನ ನಡುವೆ ಪರಿತಪಿಸುತ್ತಿರುವ ಈ ಜಾನುವಾರುಗಳು ಅನಾಥರಾಗಿ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ವೇದನೆ ಅನುಭವಿಸುತ್ತಿದೆ. ಪಕ್ಕದ ಗಿಡಗಂಟಿಗಳ ಮರೆಯಲ್ಲಿ ಆಶ್ರಯ ಪಡೆಯುತ್ತಿರುವ ಹಸು ಹಾಗೂ ಕರು ಪರಿತಪಿಸುತ್ತಿದ್ದು, ಬೀದಿ ನಾಯಿಗಳ ಹಾವಳಿಯಿಂದ ಜೀವ ಉಳಿಸುಕೊಳ್ಳುವ ದೃಶ್ಯ ಕೂಡ ಗೋಚರಿಸಿದೆ.

ಜಾನುವಾರುಗಳ ಮಾಲೀಕರು ಇಲ್ಲದಿರುವುದು ಮೂಕರೋದನೆಗೆ ಕಾರಣವಾಗಿದೆ. ಸಂಬAಧಪಟ್ಟವರು ಜಾನುವಾರುಗಳ ರಕ್ಷಣೆಗೆ ಮುಂದೆ ಬರಬೇಕಾಗಿದೆ.