ಗೋಣಿಕೊಪ್ಪಲು, ಏ.೭: ಅಬಕಾರಿ ಹೊಸ ನಿಯಮದಂತೆ ಕೆ.ಎಸ್.ಬಿ.ಸಿ.ಎಲ್.ಡಿಪೋದಲ್ಲಿ ಇತ್ತೀಚೆಗೆ ವೆಬ್ ಇಂಡೆನ್ಟಿAಗ್ ಅಳವಡಿಸಲಾಗಿದ್ದು, ಇದರಿಂದ ಸಮಸ್ಯೆ ಉಲ್ಬಣಿಸುತ್ತಿದೆ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸನ್ನದುದಾರರ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಕೆ.ಎಸ್.ಬಿ.ಸಿ.ಎಲ್.ಡಿಪೋದ ಮುಂದೆ ಮದ್ಯ ಮಾರಾಟಗಾರರ ಸಂಘದಿAದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವೀರಾಜಪೇಟೆಯ ತಾಲೂಕು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೀರಜ್ ಅಪ್ಪಚ್ಚು ಮುಂದಾಳತ್ವದಲ್ಲಿ ವೀರಾಜಪೇಟೆಯ ಕೆ. ಎಸ್.ಬಿ.ಸಿ.ಎಲ್.ಡಿಪೋದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮದ್ಯ ಮಾರಾಟಗಾರರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷÀ ಗುಮ್ಮಟ್ಟೀರ ಕಿಲನ್ ಗಣಪತಿ ಈ
ಹಿಂದೆ ಇದ್ದಂತಹ ಹಳೆ ಪದ್ಧತಿಯನ್ನು ಕನಿಷ್ಟ ಒಂದು ತಿಂಗಳ ಮಟ್ಟಿಗೆ ಮುಂದುವರೆಸಬೇಕು. ನಂತರದ ದಿನಗಳಲ್ಲಿ ನೂತನ ವ್ಯವಸ್ಥೆ ಜಾರಿ ಗೊಳಿಸಬೇಕು. ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸದ್ಯದ ಮಟ್ಟಿಗೆ ಸನ್ನದುದಾರರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮದ್ಯ ಮಾರಾಟಗಾರರ ಸಂಘದ ಮುಖೇನ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದೇವೆ. ಜಿಲ್ಲೆಯ ವಿವಿಧೆಡೆ ಇರುವ ಎಸ್.ಬಿ.ಸಿ.ಎಲ್.ಡಿಪೋದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಅಬಕಾರಿ ಇಲಾಖೆಯ ವೀರಾಜಪೇಟೆ ಉಪವಿಭಾಗದ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ವೀರಾಜಪೇಟೆ ವಲಯದ ಉಪ ಆಯುಕ್ತ ಪರವಾಗಿ ಮದ್ಯ ಮಾರಾಟಗಾರರ ಸಂಘದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಬಿ.ಸಿ.ಎಲ್.ನ ವೆಂಕಟೇಶ್, ಸಂಘವು ನೀಡಿದ ಮನವಿಯನ್ನು ಕೂಡಲೇ ಇಲಾಖೆಯ ಆಯುಕ್ತರಿಗೆ ಕಳುಹಿಸಿಕೊಡಲಾಗುವುದು ಸದ್ಯದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಕುಶಾಲನಗರದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿನ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮದ್ಯ ಮಾರಾಟಗಾರ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷರಾದ ವೀರಜ್‌ಅಪ್ಪಚ್ಚು. ಕುಶಾಲನಗರದ ಅಧ್ಯಕ್ಷ ಮಹೇಶ್‌ಕುಮಾರ್, ನಿರ್ದೇಶಕರಾದ ಜಗದೀಶ್, ಜೀವನ್, ಶಶಿ, ಸೈಮನ್, ಸನ್ನದುದಾರರಾದ ಅಯ್ಯಪ್ಪ, ಮತ್ತಿತರರು ಉಪಸ್ಥಿತರಿದ್ದರು.