ಕೂಡಿಗೆ, ಏ. ೬: ಹೆಬ್ಬಾಲೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಹೊನ್ನಾರು ಉತ್ಸವ ಕಾರ್ಯಕ್ರಮವು ಸಡಗರ ಸಂಭ್ರಮದಿAದ ಆಚರಿಸಲಾಯಿತು.

ಯುಗಾದಿ ಹಬ್ಬ ಕಳೆದ ೫ ದಿನಗಳ ನಂತರ ಗ್ರಾಮದ ೫೦ಕ್ಕೂ ಹೆಚ್ಚು ಜೋಡಿ ಎತ್ತುಗಳ ಹೊನ್ನಾರು ಉತ್ಸವವು ಮೊದಲ ಹೆಬ್ಬಾಲೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿ ಸೇರಿ ಶ್ರೀ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಸಾಗಿ ನಂತರ ಶ್ರೀ ಬನಶಂಕರಿ ದೇವಾಲಯದ ಆವರಣಕ್ಕೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ದೇವಾಲಯ ಭೂಮಿಯಲ್ಲಿ ಹೊನ್ನಾರಿನ ಉಳುಮೆಯನ್ನು ಮಾಡಲಾಯಿತು. ಈ ಉತ್ಸವದಲ್ಲಿ ಗ್ರಾಮದ ವಿವಿಧ ಜೋಡಿ ಎತ್ತುಗಳು ಅಲಂಕಾರಗೊAಡಿದ್ದವು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಎನ್. ಬಸವರಾಜ್, ಕಾರ್ಯದರ್ಶಿ ಹೆಚ್.ಪಿ. ರಾಜು ಸೇರಿದಂತೆ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರ ಭಾಗವಹಿಸಿದ್ದರು.