ಪೊನ್ನAಪೇಟೆ, ಏ. ೭: ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಗೆ ಬಿಎಸ್ಸಿ ಅರಣ್ಯಶಾಸ್ತç ಪದವೀಧರರಿಗೆ ನೀಡಿದ್ದ ಶೇಕಡಾ ೭೫ ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇಕಡ ೫೦ಕ್ಕೆ ಇಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಪೊನ್ನಂಪೇಟೆ ಕರ್ನಾಟಕ ಅರಣ್ಯ ಪದವೀಧರರ ಮತ್ತು ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ೨ ನೇ ದಿನವೂ ಮುಂದುವರೆದಿದೆ.

ಅರಣ್ಯ ಇಲಾಖೆಯಲ್ಲಿನ ಎ ಸಿ ಎಫ್, ಆರ್ ಎಫ್ ಓ ಮತ್ತು ಡಿ ವೈ ಆರ್ ಎಫ್ ಓ ಹುದ್ದೆಗಳಿಗೆ ಅರಣ್ಯ ಶಾಸ್ತç ಪದವಿಯನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡಬೇಕು ಹಾಗೂ ಅರಣ್ಯ ಪದವೀಧರರಿಗೆ ಅರಣ್ಯ ಇಲಾಖೆಯಲ್ಲಿ ಶೇ.೧೦೦ ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುತ್ತಿರುವ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರತಿಭಟನೆಯ ಮುಂದುವರೆದ ಭಾಗವಾಗಿ ಇಂದು ಪೊನ್ನಂಪೇಟೆ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದರು.

ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಿಂದ ಗ್ರಾಮದ ಬಸ್ ನಿಲ್ದಾಣದವರೆಗೆ ಹಾಗೂ ನ್ಯಾಯಾಲಯ ಸಂಕೀರ್ಣದಿAದ ರಾಮಕೃಷ್ಣ ಶಾರದಾಶ್ರಮದವರೆಗೆ ಸ್ವಚ್ಛತಾ ಕಾರ್ಯವನ್ನು ಮಾಡಿದರು. ತರಗತಿ ಗಳನ್ನು ಬಹಿಷ್ಕರಿಸಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿರುವ ವಿದ್ಯಾರ್ಥಿ ಗಳು, ಎಲ್ಲಿಯವರೆಗೆ ನಮ್ಮ ಕೂಗನ್ನು ಸರ್ಕಾರ ಕೇಳುವುದಿಲ್ಲವೋ, ಅಲ್ಲಿಯ ವರೆಗೂ ಹೋರಾಟ ಮುಂದುವರೆಸು ವುದಾಗಿ "ಶಕ್ತಿ"ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.