ಗೋಣಿಕೊಪ್ಪ ವರದಿ, ಏ. ೬: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವ ಮೇ ೧ ರಿಂದ ಮೇ ೪ ರವರೆಗೆ ಆಯೋಜಿಸಲು ಸಮಾಜದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರೀಡೋತ್ಸವವನ್ನು ಮೂರ್ನಾಡು ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಸುವಂತೆಯೂ, ೯ ವಲಯಗಳಿಂದ ಕ್ರಿಕೆಟ್ ಹಿರಿಯ ಪುರುಷರÀ ೨೬ ತಂಡಗಳು, ಕ್ರಿಕೆಟ್ ಬಾಲಕರ ೮ತಂಡಗಳು, ಮಹಿಳಾ ವಿಭಾಗದ ಥ್ರೋಬಾಲ್‌ಗೆ ೯ ತಂಡಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಕ್ರೀಡಾಕೂಟ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್ ತಿಳಿಸಿದರು. ತಾ. ೨೦ ರೊಳಗೆ ತಂಡದ ಹೆಸರು ನೋಂದಣಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು. ಸಮಾಜದ ಮಹಾಸಭೆಯನ್ನು ತಾ. ೧೦ ರಂದು ಬಿಟ್ಟಂಗಾಲದಲ್ಲಿರುವ ಸಮಾಜದ ಸಭಾಂಗಣದಲ್ಲಿ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಉಪಾಧ್ಯಕ್ಷ ಕೊರಕುಟ್ಟಿರ ಸರಾಚಂಗಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ತೋರೇರ ಮುದ್ದಯ್ಯ, ಚರ್ಮಂಡ ಪೂವಯ್ಯ, ಕೊಂಗೆಪAಡ ರವಿ, ತಂಬAಡ ಮಂಜು, ಮೂರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಪಂದಿಕAಡ ಸುನಾ, ಅರುಣ್ ಇದ್ದರು. ೯ ವಲಯಗಳ ಸಂಚಾಲಕರು ಹಾಜರಿದ್ದರು.