ಮಡಿಕೇರಿ, ಏ. ೭: ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಬೌದ್ಧ ಮಹಾಸಭಾದ ಕೊಡಗು ಶಾಖೆಯನ್ನು ರಚಿಸುವ ನಿಟ್ಟಿನಲ್ಲಿ ತಾ. ೧೦ರಂದು ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ. ದೇವರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ಕೊಡಗು ಜಿಲ್ಲ್ಲಾ ಶಾಖೆ ರಚನೆ ಸಂಬAಧ ಚರ್ಚಿಸಲಾಗುತ್ತದೆ. ಈ ಸಭೆಯಲ್ಲಿ ಸಮಾಜಮುಖಿ ಪ್ರಗತಿಪರ ಹಿರಿಯರು, ಮುಖಂಡರು, ಯುವಕರು, ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬೌದ್ಧ ಮಹಾಸಭಾದ ಸದಸ್ಯ ಮಹದೇವ್ ಉಪಸ್ಥಿತರಿದ್ದರು.