ಕಣಿವೆ, ಏ. ೭: ಹಾರಂಗಿ ಸಮೀಪದ ಬೆಂಡೆಬೆಟ್ಟ ಗಿರಿಜನ ಹಾಡಿಗೆ ಆಗಮಿಸಿದ್ದ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಗಿರಿಜನ ನಿವಾಸಿಗಳಿಂದ ಅಹವಾಲು ಆಲಿಸಿದರು.

ಗಿರಿಜನ ಹಾಡಿಯಲ್ಲಿ ಮನೆಗಳಿಲ್ಲದೇ ಪ್ಲಾಸ್ಟಿಕ್ ಹೊದಿಕೆ ಕಟ್ಟಿಕೊಂಡು ಬದುಕುತ್ತಿರುವ ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಹಾಡಿಯಲ್ಲಿ ಇರುವ ದೇವಾಲಯ ಶಿಥಿಲವಾಗಿದ್ದು ಕೂಡಲೇ ಹೊಸದಾಗಿ ದೇವಾಲಯ ನಿರ್ಮಿಸಿಕೊಡಬೇಕೆಂದು ಹಾಡಿಯ ಅಧ್ಯಕ್ಷ ಹರೀಶ್ ತಹಶೀಲ್ದಾರರಲ್ಲಿ ಕೋರಿಕೊಂಡರು.

ಹಾಡಿಯ ಪ್ರತೀ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕೆಂದು ಪೋಷಕರಿಗೆ ಕರೆಕೊಟ್ಟ ತಹಶೀಲ್ದಾರ್ ಪ್ರಕಾಶ್, ನಿವಾಸಿಗಳಿಗೆ ಅಗತ್ಯವಾಗಿ ಬೇಕಿರುವ ಮನೆಗಳನ್ನು ಒದಗಿಸುವ ಸಲುವಾಗಿ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. ಈ ಸಂದರ್ಭ ಉಪನ್ಯಾಸಕ ಮೆ.ನಾ. ವೆಂಕಟನಾಯಕ್, ಅರಣ್ಯ ಅಧಿಕಾರಿ ಅನಿಲ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಪಿಡಿಓ ಸಂತೋಷ್ ಇದ್ದರು.