ಮಡಿಕೇರಿ, ಏ. ೭: ಜೋಡುಪಾಲ ಗೆಳೆಯರ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ಎನ್‌ಎಂಸಿ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿತು.

ದ್ವಿತೀಯ ಬಹುಮಾನ ಕಲ್ಲಡ್ಕದ ವಿಘ್ನೇಶ್ವರ ತಂಡದ ಪಾಲಾದರೆ, ತೃತೀಯ ಬಹುಮಾನ ಮಡಿಕೇರಿಯ ಹಿಂದೂ ಕ್ರಿಕೆಟ್ ಕಪ್ ತಂಡದ ಪಾಲಾಯಿತು, ೪ನೇ ಬಹುಮಾನ ಎನ್‌ಎನ್‌ಎಸ್ಸಿ ಮದೆ ತಂಡ ಪಡೆದುಕೊಂಡಿತು. ಪಂದ್ಯಾಟದ ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯ. ಕಬಡ್ಡಿ ಆಟಕ್ಕೆ ಇತ್ತೀಚೆಗೆ ಭಾರಿ ಜನ ಬೆಂಬಲ ಸಿಗುತ್ತಿದೆ. ಕಬಡ್ಡಿಯಂತಹ ಪಂದ್ಯಗಳನ್ನು ಮನೆಮನೆಗಳಲ್ಲೂ ವೀಕ್ಷಿಸುತ್ತಿದ್ದಾರೆ ಪ್ರತಿಭಾನ್ವಿತ ಆಟಗಾರರಿಗೆ ಕಬಡ್ಡಿಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.

ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯ. ಕಬಡ್ಡಿ ಆಟಕ್ಕೆ ಇತ್ತೀಚೆಗೆ ಭಾರಿ ಜನ ಬೆಂಬಲ ಸಿಗುತ್ತಿದೆ. ಕಬಡ್ಡಿಯಂತಹ ಪಂದ್ಯಗಳನ್ನು ಮನೆಮನೆಗಳಲ್ಲೂ ವೀಕ್ಷಿಸುತ್ತಿದ್ದಾರೆ ಪ್ರತಿಭಾನ್ವಿತ ಆಟಗಾರರಿಗೆ ಕಬಡ್ಡಿಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.

ಸಂಕಷ್ಟಗಳನ್ನು ತಂದೊಡ್ಡಿತು. ಆದರೆ ಈಗ ಅಂತಹ ಎಲ್ಲಾ ಸಂಕಷ್ಟಗಳಿAದ ಹೊರ ಬಂದು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಅಮೆಚೂರ್ ಅಸೋಸಿಯೇಷನ್‌ನ ಕಾರ್ಯದರ್ಶಿ ಕಪಿಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಪ್ರಮೋದ್ ಚೆರಿಯಮನೆ ಅವರು ವಹಿಸಿದ್ದರು. ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಆರ್. ರಾಜು, ಪಡ್ಪು ಸಂಜಯ್, ಮದೆ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ, ಪಂಚಾಯಿತಿ ಸದಸ್ಯ ಸಯ್ಯದ್ ಆಲ್ವಿ ಉಪಸ್ಥಿತರಿದ್ದರು. ಪಂದ್ಯಕ್ಕೂ ಮುನ್ನ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಆಗಮಿಸಿ ಶುಭ ಹಾರೈಸಿದರು. ಕಬ್ಬಡ್ಡಿ ಪಂದ್ಯಾಟಕ್ಕೆ ಮುನ್ನ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಪಂದ್ಯಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜೋಡುಪಾಲ ಗೆಳೆಯರ ಬಳಗದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.