ಕೂಡಿಗೆ, ಆ. ೭: ಕಾವೇರಿ ನೀರಾವರಿ ನಿಗಮದ ಅಧೀನಕ್ಕೆ ಒಳಪಡುವ ಚಿಕ್ಲಿಹೊಳೆ ನಾಲೆಯ ಯೋಜನೆಯ ಅಡಿಯಲ್ಲಿರುವ ನಾಲೆಗಳ ಸೇವಾ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದು ಇದರಿಂದಾಗಿ ಕೆಲವು ರೈತರಿಗೆ ಕೃಷಿ ಚಟುವಟಿಕೆಗೆ ಮತ್ತು ಬೆಳೆದ ಬೆಳೆಯನ್ನು ಸಾಗಾಟ ಮಾಡಲು ತೊಂದರೆಗಳು ಆಗುತ್ತಿವೆ ಎಂದು ನೀರಾವರಿ ಇಲಾಖೆಗೆ ಹಲವಾರು ದೂರುಗಳು ಬಂದಿರುವುದರಿAದ ಒತ್ತುವರಿ ಮಾಡಿಕೊಂಡಿರುವ ರೈತರು ಜಾಗ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.
ಚಿಕ್ಲಿಹೊಳೆ ನಾಲೆಯ ಅಂಚಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ರೈತರು ಹದಿನೈದು ದಿನಗಳೊಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಹಾರಂಗಿ ಯೋಜನಾ ವೃತ್ತದ ಸೂಪರಿಂಟೆAಡಿAಗ್ ಇಂಜಿನಿಯರ್ ಎನ್ ಬಿ ಚನ್ನಕೇಶವ ಲಿಖಿತ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.