ಕೂಡಿಗೆ, ಏ. ೭: ಜಿಲ್ಲೆಯ ಗಡಿ ಭಾಗ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿAದ ಗ್ರಾಮಸ್ಥರು ಹೊನ್ನಾರು ಉತ್ಸವವನ್ನು ಆಚರಣೆ ಮಾಡಿದರು.
ಶ್ರೀ ಹನುಮಂತರಾಯ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಿದ ಹೊನ್ನಾರು ಉತ್ಸವ ಕಾರ್ಯಕ್ರಮ ಗ್ರಾಮದ ೩೦ ಜೋಡಿ ಎತ್ತುಗಳು ಭಾಗವಹಿದ್ದವು. ಹೊಸ ವರ್ಷ ಆರಂಭದ ದಿನವಾದ ಶನಿವಾರ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ ಆಚರಿಸುವ ಮೂಲಕ ಸಂಭ್ರಮ ಸಡಗರ ಪಟ್ಟರು.
ಈ ವ್ಯಾಪ್ತಿಯ ಗ್ರಾಮಗಳಲ್ಲಿ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆ ಹಾಗೂ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿ ಸಲಾಗಿತು. ಜೊತೆಗೆ ತಮ್ಮ ದನ-ಕರುಗಳು, ಎತ್ತುಗಳನ್ನು ಸ್ವಚ್ಛಗೊಳಿಸಿ ಗೋ ಪೂಜೆ ಸಲ್ಲಿಸಿದರು. ಇದೆ ವೇಳೆ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿದರು.
ಇದೇ ಮಾದರಿಯಲ್ಲಿ ಕುಶಾಲನಗರ ತಾಲೂಕಿನ ಗ್ರಾಮಾಂತರ ಪ್ರದೇಶಗಳಾದ ಹುಲುಸೆ, ಕೂಡ್ಲೂರು, ಮುಂತಾದ ಕಡೆಗಳಲ್ಲಿ ರೈತರು ಶನಿವಾರ ಹೊನ್ನಾರು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಮೋಹನರಾಜ್, ಕಾರ್ಯದರ್ಶಿ ಟಿ.ಕೆ. ವಸಂತ, ನಿಕಟಪೂರ್ವ ಅಧ್ಯಕ್ಷ ಟಿ.ಸಿ. ಚಿಕ್ಕಯ್ಯ, ನಿಕಟ ಪೂರ್ವ ಕಾರ್ಯದರ್ಶಿ ಎಸ್.ಎಂ. ಹರೀಶ್, ಸಮಿತಿಯ ಸದಸ್ಯರಾದ ಬಿ.ಎ. ಹರೀಶ್ ವೀರಭದ್ರ ಶೆಟ್ಟಿ ಗುರುಲಿಂಗಪ್ಪ ಉಮೇಶ್ ಶಿವಾನಂದ ಅಶೋಕ ಕುಮಾರ್ ವೆಂಕಟೇಶ ಮನು ಕುಮಾರ್ ಮಂಜುನಾಥ ಗೌರವ ಅಧ್ಯಕ್ಷ ಗುರುಲಿಂಗಪ್ಪ ರಾಜಶೇಖರ ಮಧು ಟಿ.ಎಸ್. ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.