ಮಡಿಕೇರಿ, ಏ. ೬: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಟ್ಟಡ ಶಂಕು ಸ್ಥಾಪನೆ ನೆರವೇರಿತು.

ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್, ರತನ್, ಭಾಗಮಂಡಲ ಕಾವೇರಿ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್, ಉಪಾಧ್ಯಕ್ಷ ಕೆ.ಯು.ಹ್ಯಾರಿಸ್, ಗೌರವ ಕಾರ್ಯದರ್ಶಿ ನಿಡ್ಯಮಲೆ ಪಿ. ರವೀಂದ್ರ, ನಿರ್ದೇಶಕರಾದ ರವಿ ಹೆಬ್ಬಾರ್, ಜೆ.ಎಸ್. ನಂಜುAಡಪ್ಪ, ಮೊಟ್ಟನ ಜ್ಯೋತಿ ಶಂಕರ್, ಕುಯ್ಯಮುಡಿ ಮನೋಜ್, ಹೊಸೊಕ್ಲು ನಿರಂಜನ್, ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷ ಕುಯ್ಯಮುಡಿ ರಂಜು, ಕಟ್ಟಡದ ಗುತ್ತಿಗೆದಾರ ಎಸ್. ಸುರೇಶ್, ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ್, ಪ್ರೌಢ ಶಾಲಾ ಕಿರಿಯ ಸಹಾಯಕ ಶಿಕ್ಷಕ ಜೆ.ಶ್ರೀಕೃಷ್ಣ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.