ನಾಪೋಕ್ಲು, ಏ. ೬: ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದ ದಿ ತಾಮರ ಕೂರ್ಗ್ ರೆಸಾರ್ಟ್ ವತಿಯಿಂದ ಸುಮಾರು ರೂ. ೪೪ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಯವಕಪಾಡಿ ಅಡಿಯರ ಕಾಲೋನಿ ಕಾಂಕ್ರೀಟ್ ರಸ್ತೆಯನ್ನು ಯವಕಪಾಡಿ ಗ್ರಾಮದ ಹಿರಿಯರಾದ ಕೇಟೋಳಿರ ರಘು ಕುಟ್ಟಪ್ಪ ಉದ್ಘಾಟಿಸಿದರು.
ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ರೆಸಾರ್ಟ್ನ ಜನರಲ್ ಮ್ಯಾನೇಜರ್ ಕೆ.ಕೆ. ಬಾಜಪೇಯಿ, ಸಲಹೆಗಾರ ಪಾಲೆಕಂಡ ಸಾಯಿ ಕರುಂಬಯ್ಯ, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಗ್ರಾಮಸ್ಥರಾದ ಪಾಂಡAಡ ಕಿಶನ್, ಕೇಟೋಳಿರ ಅಪ್ಪಣ್ಣ, ಅಪ್ಪಾರಂಡ ಸಾಗರ್, ಕುಡಿಯರ ಮುತ್ತಪ್ಪ, ಅಂಜಪರವAಡ ಕುಶಾಲಪ್ಪ, ಅರೆಯಡ ಜೀವನ್, ಚಂಡೀರ ಜಗದೀಶ್, ಮತ್ತಿತರರು ಇದ್ದರು. ಬಡಕಡ ಸುರೇಶ್ ಬೆಳ್ಯಪ್ಪ ಸ್ವಾಗತಿಸಿ, ರೆಸಾರ್ಟ್ನ ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ ವಂದಿಸಿದರು.