ಗೋಣಿಕೊಪ್ಪಲು, ಏ.೬: ಅಭಯಾರಣ್ಯಗಳು, ವನ್ಯಪ್ರಾಣಿಗಳ ವಿನಾಶಕ್ಕೆ ಮಾನವನೇ ಕಾರಣ. ಹಲವು ಪ್ರಭೇದದ ಗಿಡಮರಗಳು, ವನ್ಯಪ್ರಾಣಿಗಳು ಇಂದು ವಿನಾಶದ ಹಂಚಿನಲ್ಲಿವೆ. ಇವುಗಳ ರಕ್ಷಣೆ ನಮ್ಮ ಹೊಣೆ. ಮಾನವನ ಹಸ್ತಕ್ಷೇಪ ಅರಣ್ಯದ ಮೇಲೆ ಕೂಡದು. ಒಂದೊಮ್ಮೆ ಕಾಡುಪ್ರಾಣಿಗಳು, ಅಮೂಲ್ಯ ಸಸ್ಯಗಳು ಕಣ್ಮರೆಯಾದಲ್ಲಿ ಮಾನವನ ಅವಸಾನ ಖಚಿತ ಎಂದು ವೈಲ್ಡ್ ಲೈಫ್ ಫಸ್ಟ್ ರಾಜ್ಯಾಧ್ಯಕ್ಷ, ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ವಿವರಿಸಿದರು.
ಬೆಂಗಳೂರು ಯಶವಂತಪುರದ ಆರ್.ಜಿ.ರಾಯಲ್ ಹೊಟೇಲ್ ಸಭಾಂಗಣದಲ್ಲಿ ಜರುಗಿದ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ (ಜಿಲ್ಲೆ ೩೧೭ಎಫ್) ವಲಯ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯಲ್ಲಿ ಯುವ ಜನಾಂಗದ ಕರ್ತವ್ಯ ವಿಚಾರವಾಗಿ ಚಿಣ್ಣಪ್ಪ ಮಾತನಾಡಿ, ಅರಣ್ಯ ಬೆಳೆಸಲು ಮನುಷ್ಯನಿಂದ ಅಸಾಧ್ಯ. ವನ್ಯಪ್ರಾಣಿಗಳ ಸಂರಕ್ಷಣೆಗೆ ಯುವ ಜನಾಂಗ ಕೈಜೋಡಿಸಿದ್ದಲ್ಲಿ ಉತ್ತಮ ಅರಣ್ಯ ಬೆಳೆಸಲು ಸಾಧ್ಯ. ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ೧೯೮೦ ರ ದಶಕದಲ್ಲಿ ವನ್ಯಪ್ರಾಣಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಿದ ಹಿನ್ನೆಲೆ ಕಾಡುಪ್ರಾಣಿಗಳ ಸಂಖ್ಯೆ ಅಧಿಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಆರ್.ಲೀಲಾ ಕೃಷ್ಣ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಹಿರಿಯ ಅಧಿಕಾರಿ, ಕೆಪಿಎಸ್ಸಿ ಗೌರವ ಸದಸ್ಯ ಡಾ. ಆರ್. ಲಕ್ಷಿö್ಮನಾರಾಯಣ ಅವರೂ ಸನ್ಮಾನ ಸ್ವೀಕರಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಯುವಜನಾಂಗದ ಪಾತ್ರ ಕುರಿತು ಮಾತನಾಡಿದರು.
ಮಾಜಿ ಹಿರಿಯ ಅಧಿಕಾರಿ, ಕೆಪಿಎಸ್ಸಿ ಗೌರವ ಸದಸ್ಯ ಡಾ. ಆರ್. ಲಕ್ಷಿö್ಮನಾರಾಯಣ ಅವರೂ ಸನ್ಮಾನ ಸ್ವೀಕರಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಯುವಜನಾಂಗದ ಪಾತ್ರ ಕುರಿತು ಮಾತನಾಡಿದರು.