ಮಡಿಕೇರಿ, ಏ. ೫: ದೇವಾಟ್ ಪರಂಬ್ ದುರಂತವನ್ನು ಯುಎನ್‌ಓದ ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸುವ ಮೂಲಕ ದೇವಾಟ್ ಪರಂಬು ಕೊಡವ ನರಮೇಧದ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಸಂವಿಧಾನದ ಅನುಚ್ಛೇದ ೪೯ ಮತ್ತು ೧೯೬೪ ರ ವೆನಿಸ್ ಚಾರ್ಟರ್ ಅಡಿಯಲ್ಲಿ ಅಂತರರಾಷ್ಟಿçÃಯ ಕೊಡವ ನರಮೇಧ ಸ್ಮಾರಕವನ್ನು ಸ್ಥಾಪಿಸಬೇಕು. ಕೊಡವ ನರಮೇಧದಲ್ಲಿ ಮಾನವನ ನಷ್ಟಕ್ಕೆ ಪರಿಹಾರದ ಅಳತೆಯಾಗಿ, ನಮ್ಮ ಸಂವಿಧಾನದ ಬುಡಕಟ್ಟು ಪಟ್ಟಿಯಲ್ಲಿ ಕೊಡವ ಜನಾಂಗವನ್ನು ಸೇರಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಎನ್.ಯು. ನಾಚಪ್ಪ ಮಾತನಾಡಿದರು. ಬಳಿಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ, ಗೃಹಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕಲಿಯಂಡ ಪ್ರಕಾಶ್, ಅಜ್ಜಿಕುಟೀರ ಲೋಕೇಶ್, ಅರೆಯಡ ಗಿರಿ, ಬೊಟ್ಟಂಗಡ ಗಿರೀಶ್, ಮಣವಟ್ಟಿರ ಜಗ್ಗು, ಜಮ್ಮಡ ಸಿ. ಮೋಹನ್, ಮದ್ರಿರ ಕರುಂಬಯ್ಯ, ಪುಳ್ಳಂಗಡ ನಟೇಶ್, ಪಟ್ಟಮಾಡ ಕುಶ, ಮಣವಟ್ಟಿರ ಉತ್ತಮ, ಮಣವಟ್ಟಿರ ಚಿಣ್ಣಪ್ಪ, ಕಿರಿಯಮಾಡ ಶರಿನ್, ಅಜ್ಜಿನಿಕಂಡ ಸನ್ನಿಮಾಚಯ್ಯ, ಪುಲ್ಲೇರ ಕಾಳಪ್ಪ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ವಿಜು, ಪುದಿಯೊಕ್ಕಡ ಕಾಶಿ, ಚೋಳಪಂಡ ನಾಣಯ್ಯ, ನಂದಿನೆರವAಡ ಅಪ್ಪಯ್ಯ, ಅಪ್ಪರಂಡ ಪ್ರಸಾದ್, ಮುಕ್ಕಾಟೀರ ಕಿಟ್ಟು, ನಂದಿನೆರವAಡ ದಿನೇಶ್, ಚೀಯಬೆರ ಸತೀಶ್ ಇದ್ದರು.