ಸೋಮವಾರಪೇಟೆ, ಏ. ೫: ಸಮೀಪದ ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬೀರೇದೇವರು ಹಾಗೂ ಮಹಾಲಿಂಗೇಶ್ವರ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. ೨ ಲಕ್ಷ ನೆರವು ನೀಡಲಾಯಿತು.
ಯಲಕನೂರು ಗ್ರಾಮದಲ್ಲಿ ಸುಮಾರು ೮೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೀರೇದೇವರು ಹಾಗೂ ಮಹಾಲಿಂಗೇಶ್ವರ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಿಡುಗಡೆಯಾದ ೨ ಲಕ್ಷ ರೂ.ಗಳ ಚೆಕ್ ಅನ್ನು ತಾಲೂಕು ಯೋಜನಾಧಿಕಾರಿ ರೋಹಿತ್ ಅವರು ಗ್ರಾಮದ ಅಧ್ಯಕ್ಷ ಶಿವಾನಂದ ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಗ್ರಾ.ಪಂ. ಸದಸ್ಯ ವಿನೋದ್‌ಕುಮಾರ್, ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ಶೈಲಾ, ದೇವಾಲಯ ಸಮಿತಿಯ ಹರೀಶ್, ಬಸಪ್ಪ, ಸುರೇಶ್, ನಟರಾಜ್, ರವಿಶಂಕರ್ ಹಾಜರಿದ್ದರು.