ಮಡಿಕೇರಿ, ಏ. ೫: ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಘೋಷಣೆ ಯಾಗಿದ್ದು, ಜಿಲ್ಲೆಯ ಮೂವರು ಕ್ರೀಡಾ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಪ್ರಕಟಿಸಲಾಗಿರುವ ಹಾಕಿ ಆಟಗಾರ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಸೇರಿದಂತೆ, ಬಾಸ್ಕೆಟ್ ಬಾಲ್ ಆಟಗಾರ್ತಿ ಕೊಕ್ಕಲೇರ ಲೋಪಾಮುದ್ರ ತಿಮ್ಮಯ್ಯ ಹಾಗೂ ಅಥ್ಲೆಟಿಕ್ಸ್ನಲ್ಲಿ ಕೆ.ಎಸ್. ಜೀವನ್ ಅವರುಗಳೂ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೨೦೨೦-೨೧ನೇ ಸಾಲಿನ ಪ್ರಶಸ್ತಿಯನ್ನು ಕ್ರೀಡಾ ಸಚಿವ ಡಾ. ನಾರಾಯಣಗೌಡ ಘೋಷಣೆ ಮಾಡಿದ್ದು, ಬಾಸ್ಕೆಟ್ಬಾಲ್ ಆಟಗಾರ್ತಿ, ಕೊಕ್ಕಲೇರ ಲೋಪಾಮುದ್ರ ತಿಮ್ಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂರು ಬಾರಿ ಭಾರತ ತಂಡದಲ್ಲಿ ಮೂರು ಬಾರಿ ಆಡಿರುವ ಲೋಪಾಮುದ್ರ ಕಳೆದ ಸಾಲಿನಲ್ಲಿ ನೇಪಾಳದಲ್ಲಿ ನಡೆದ ಸೌತ್ ಏಷಿಯನ್ ಫೆಡರೇಶನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದಾಳೆ. ಈಕೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮ ನಿವಾಸಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಮಕ್ಕಂದೂರು ವಿಎಸ್ಎಸ್ಎನ್ ಅಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ ಹಾಗೂ ಪೂಜಾ ದಂಪತಿಯರ ಪುತ್ರಿ.
ಸೋಮವಾರಪೇಟೆ: ತಾಲೂಕಿನ
ಬೇಳೂರು ಗ್ರಾಮ
ಪಂಚಾಯಿತಿ
ವ್ಯಾಪ್ತಿಯ
ಕಾರೇಕೊಪ್ಪ
ನಿವಾಸಿ,
ಅಥ್ಲೆಟಿಕ್ಸ್ನಲ್ಲಿ
ಸಾಧನೆ
ಮಾಡುತ್ತಿರುವ ಕೆ.ಎಸ್. ಜೀವನ್ ಅವರೂ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯದ ೧೫ ಮಂದಿಯ ಪೈಕಿ ಜಿಲ್ಲೆಯ ಮೂವರು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಕಲವ್ಯ ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ, ಸಮವಸ್ತç, ೨ಲಕ್ಷ ನಗದು ಬಹುಮಾನವನ್ನು ಒಳಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ ೧೫೧ ಮಂದಿ ಅರ್ಜಿ ಸಲ್ಲಿಸಿದ್ದರು. ತಜ್ಞರ ಸಮಿತಿ ಪರಿಶೀಲನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಿದ್ದು, ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ, ದಿನಾಂಕ ನಿಗದಿಪಡಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ನಾರಾಯಣಗೌಡ ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.