ವೀರಾಜಪೇಟೆ, ಏ. ೬: ವೀರಾಜಪೇಟೆ ಸಮೀಪದ ಐಮಂಗಲ ಗ್ರಾಮದ ಕುಂಡ್ರAಡ ಸಿ. ಪೊನ್ನಪ್ಪ ಅವರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದ ಬಾಳೆ, ಅಡಿಕೆ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸಿವೆ.
ಐಮಂಗಲ ಗ್ರಾಮದಲ್ಲಿ ಪದೆ ಪದೆ ಆನೆಗಳು ದಾಳಿ ನಡೆಸುತ್ತಿದ್ದು ಸಂಜೆ ವೇಳೆಗೆ ರಸ್ತೆ ಹಾಗೂ ತೋಟಗಳಿಗೆ ಬರುತ್ತವೆ. ಗ್ರಾಮಸ್ಥರು ನಡೆದಾಡಲು ಭಯಬೀತರಾಗಿದ್ದಾರೆ. ಈ ಸಂಬAದ ಈಗಾಗಲೇ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿದ್ದು, ನಷ್ಟ ಸಂಭವಿಸಿರುವುದಕ್ಕೆ ಪರಿಹಾರ ಮತ್ತು ಕಾಡಾನೆಗಳನ್ನು ಕಾಡಿಗೆ ಅಟ್ಟುವಂತ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕೆಂದು ಪೊನ್ನಪ್ಪ ಒತ್ತಾಯಿಸಿದ್ದಾರೆ.