ಶನಿವಾರಸಂತೆ, ಏ. ೫: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ತೋಟದಲ್ಲಿ ಹಲಸಿನ ಮರಕ್ಕೆ ಇಟ್ಟಿದ್ದ ಏಣಿಯನ್ನು ಹತ್ತಿ ಹಲಸಿನಕಾಯಿ ಕುಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡ ಬಾಲಕನನ್ನು ಹಾಸನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಕೊಡ್ಲಿಪೇಟೆ ದೊಡ್ಡಕೊಡ್ಲಿ ಗ್ರಾಮದಲ್ಲಿ
ಏಣಿಯಿಂದ ಜಾರಿ ಬಿದ್ದು ಬಾಲಕ ದುರ್ಮರಣ
(ಮೊದಲ ಪುಟದಿಂದ) ನೆಲೆಸಿರುವ ಅಸ್ಸಾಂ ರಾಜ್ಯದ ಖಾಸಿಂ ಆಲಿ ಅವರ ಪುತ್ರ ಮುಜಾಫರ್ ಆಲಿ (೧೫) ಮೃತಪಟ್ಟ ಬಾಲಕ. ಗುತ್ತಿಗೆದಾರ ಕೈಸರ್ ಅವರಲ್ಲಿ ಖಾಸಿಂ ಆಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಸೋಮವಾರ ಖಾಸಿಂ ಆಲಿ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರೊಂದಿಗೆ ೩೭ ಕೂಲಿ ಕಾರ್ಮಿಕರ ಜತೆ ಬೆಸೂರು ಕಟ್ಟೆಪುರ ಗ್ರಾಮದ ಹನುಮೇಗೌಡರ ತೋಟದಲ್ಲಿ ಕಾಳು ಮೆಣಸು ಕುಯ್ಯುತ್ತಿದ್ದಾಗ ಘಟನೆ ನಡೆದಿದೆ.
ರಸ್ತೆಯಲ್ಲಿ ಆಟವಾಡುತ್ತಿದ್ದ ಮುಜಾಫರ್ ಆಲಿ ಪಕ್ಕದಲ್ಲಿದ್ದ ಹಲಸಿನ ಮರಕ್ಕೆ ಇಟ್ಟಿದ್ದ ಏಣಿಯನ್ನು ಹತ್ತಿ ಹಲಸಿನಕಾಯಿಯನ್ನು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಎನ್ನಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಹೆಡ್ಕಾನ್ಸ್ಟೇಬಲ್ ಕೆ.ಸಿ. ನೆºರುಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಂದೆ ಖಾಸಿಂ ಆಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.