ಸೋಮವಾರಪೇಟೆ, ಏ. ೪: ಟಾಟಾ ಕಾಫಿ ಸಂಸ್ಥೆಯ ಜಂಬೂರು ತೋಟ ವಿಭಾಗದ ವತಿಯಿಂದ ನಂದಿಮೊಟ್ಟೆ ಗ್ರಾಮದಲ್ಲಿ ವಿಶ್ವ ಜಲ ದಿನಾಚರಣೆ ಮತ್ತು ಜಲ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ದಿನಾಚರಣೆ ಅಂಗವಾಗಿ ನಂದಿಮೊಟ್ಟೆ ನದಿಯ ಬದಿಯಲ್ಲಿದ್ದ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿ, ನದಿ ತೀರವನ್ನು ಸ್ವಚ್ಛಗೊಳಿಸಲಾಯಿತು. ಇದರೊಂದಿಗೆ ಜಲಮೂಲಗಳ ಸಂರಕ್ಷಣೆ, ನೀರಿನ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭ ಎಸ್ಟೇಟ್ನ ಪ್ರಧಾನ ವ್ಯವಸ್ಥಾಪಕ ಸಿ.ಎ. ರೋಷನ್, ಉಪ ವ್ಯವಸ್ಥಾಪಕ ಅಮಿತ್ ಪೊನ್ನಣ್ಣ, ಸಿಬ್ಬಂದಿಗಳಾದ ಸುರೇಶ್, ಮಧು, ಶ್ರೀಕಾಂತ್, ರಾಜಿಮೋಲ್, ಶಿರಾಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.