ಭಾಗಮಂಡಲ, ಏ. ೪: ಭಾಗಮಂಡಲದ ರಾಮಮಂದಿರದಲ್ಲಿ ರಾಮನವಮಿ ಪ್ರಯುಕ್ತ ವಿವಿಧÀ ಧಾರ್ಮಿಕ ಕಾರ್ಯಕ್ರಮ ಶನಿವಾರದಿಂದ ಆರಂಭವಾಗಿದ್ದು, ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ತಾ.೧೦ರಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಭಾಗಮಂಡಲದಲ್ಲಿ ಸುಮಾರು ರೂ. ೧.೪೦ ಕೋಟಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ಭೂಮಿ ಪೂಜೆ ನಡೆದಿದ್ದು ರಾಮಮಂದಿರಕ್ಕೆ ಕಾರ್ಕಳದಿಂದ ನೂತನ ಶಿಲೆಯನ್ನು ಇಂದು ಭಾಗಮಂಡಲಕ್ಕೆ ತರಲಾಯಿತು ಭಾಗಮಂಡಲ- ಕರಿಕೆ ಜಂಕ್ಷನ್ ನಿಂದ ರಾಮ ಮಂದಿರದವರೆಗೆ ರಾಮಭಕ್ತರು ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ನೂತನ ಮಂದಿರದ ಕೆಲಸ ಕಾರ್ಯವು ಒಂದು ವರ್ಷದಲ್ಲಿ ಮುಕ್ತಯ ವಾಗಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.