ಮಡಿಕೇರಿ, ಏ. ೪:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ೨೦೨೧-೨೦೨೨ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಶಾಲನಗರದ ಸಿಂಚನ ಕೆ.ಐ. ಉನ್ನತ ಅಂಕಗಳೊAದಿಗೆ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಕೊಂಪುಳಿರ ಇಂದುಕುಮಾರ, ತುಳಸಿ ದಂಪತಿಯ ಪುತ್ರಿಯಾಗಿರುವ ಈಕೆ ವಿದುಷಿ ವಾಣಿ ಯಶವಂತ್ ಹಾಗೂ ಚಿತ್ರ ಕೆ.ಎಸ್. ಅವರ ಶಿಷ್ಯೆಯಾಗಿದ್ದು, ಈಕೆ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.