ಮಡಿಕೇರಿ, ಏ. ೪: ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ತಾ. ೬ ರಿಂದ (ನಾಳೆಯಿಂದ) ತಾ. ೯ರವರೆಗೆ ಮುತ್ತಪ್ಪ ಜಾತ್ರಾ ಮಹೋತ್ಸವ ನಡೆಯಲಿದೆ. ತಾ. ೬ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಬಿಷೇಕ, ೧೦ ಗಂಟೆಗೆ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ೧೧ ಗಂಟೆಗೆ ನಾಗದೇವರಿಗೆ ತಂಬಿಲ ಸಮರ್ಪಣೆ, ೧೧.೩೦ ಗಂಟೆಗೆ ಕಳಸಾಭಿಷೆಕ, ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ತಾ. ೭ರಂದು ಸಂಜೆ ೪ ಗಂಟೆಗೆ ಧ್ವಜಾರೋಹಣ, ೫.೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ೭.೩೦ ಗಂಟೆಗೆ ಹರಕೆ ಕೋಲಗಳು ನಡೆಯಲಿವೆ. ತಾ. ೮ರಂದು ಸಂಜೆ ೪ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೪.೩೦ ಗಂಟೆಗೆ ಶಾಸ್ತಪ್ಪ ದೇವರ ವೆಳ್ಳಾಟಂ, ೫ ಗಂಟೆಗೆ ಗಾಂಧಿ ಮೈದಾನದಿಂದ ಕಲಶ ಹಾಗೂ ತಾಲಾಪೊಲಿ ಮೆರವಣಿಗೆ, ೫.೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೭ ಗಂಟೆಗೆ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಮರ್ಶ, ರಾತ್ರಿ ೮.೪೦ ರಿಂದ ಅನ್ನದಾನ, ರಾತ್ರಿ ೯.೩೦ ಗಂಟೆಗೆ ಶ್ರೀ ಪೋದಿ ವೆಳ್ಳಾಟಂ, ೧೦.೩೦ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, ೧೨ ಗಂಟೆಗೆ ಶಿವಭೂತ ತೆರೆ, ರಾತ್ರಿ ೧ ಗಂಟೆಗೆ ಶ್ರೀ ಗುಳಿಗ ದೇವರ ತೆರೆ, ೨ ಗಂಟೆಗೆ ಕಳಗಪಾಟ್, ಸಂದ್ಯಾವೇಲೆ, ೨.೩೦ ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ತೆರೆ, ತಾ. ೯ರಂದು ಬೆಳಿಗ್ಗೆ ೪ ಗಂಟೆಗೆ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ, ೫ ಗಂಟೆಗೆ ವಿಷ್ಣುಮೂರ್ತಿ ದೇವರ ಮೇಲೇರಿ, ೮ ಗಂಟೆಗೆ ಶ್ರೀ ಪೋದಿ ತೆರೆ, ೯.೩೦ಕ್ಕೆ ವಿಷ್ಣುಮೂರ್ತಿ ದೇವರ ಬಾರಣೆ, ೧೧.೩೦ಕ್ಕೆ ಧ್ವಜಾಅವರೋಹಣ ನಡೆಯಲಿದೆ. ಈ ಎಲ್ಲ ಧಾರ್ಮಿಕ ಕಾರ್ಯಗಳು ಕೇರಳದ ಪಯ್ಯನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳೀಕೃಷ್ಣನ್ ನಂಬೂದರಿ, ಪರಿಶಿನಿ ಕಡವು ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನೇತೃತ್ವದಲ್ಲಿ ಜರುಗಲಿದೆ.