ಮಡಿಕೇರಿ, ಏ. ೪: ನಗರದ ಸಿದ್ದಾಪುರ ರಸ್ತೆಯ ಅಶೋಕಪುರದ ಶ್ರೀ ವೀರಭದ್ರ ಸ್ವಾಮಿ ಮತ್ತು ಪಾಷಣಮೂರ್ತಿ ದೆÉÃವಾಲಯದ ವಾರ್ಷಿಕ ಪೂಜೋತ್ಸವ ತಾ. ೮, ೯, ೧೦ ರಂದು ನಡೆಯಲಿದೆ.

ತಾ. ೮ ರಂದು ಬೆಳಿಗ್ಗೆ ೭ ಗಂಟೆಯಿAದ ಗಣಹೋಮ, ಸಂಜೆ ಸಾರ್ವಜನಿಕರಿಗೆ ಆಶ್ಲೇಷ ಬಲಿ ಪೂಜೆ, ರಾತ್ರಿ ೭ ರಿಂದ ೯.೩೦ರ ತನಕ ಸುದರ್ಶನ ಹೋಮ ನಡೆಯಲಿದೆ.

ತಾ. ೯ ರಂದು ಬೆಳಿಗ್ಗೆ ೭ ಗಂಟೆಯಿAದ ೯ ರ ತನಕ ಭದ್ರಕಾಳಿ ಹೋಮ, ೯ ಗಂಟೆಯಿAದ ೧೧.೩೦ರ ತನಕ ಶ್ರೀ ವೀರಭದ್ರಸ್ವಾಮಿ ಹಾಗೂ ಪಾಷಣಮೂರ್ತಿಗೆ ಸಾನಿಧ್ಯ ಹೋಮ, ನವಕಳಸ ಆರಾಧನೆ, ೧೧.೩೦ ರಿಂದ ಮಧ್ಯಾಹ್ನ ೧೨.೩೦ರ ತನಕ ಕಳಸ ಅಭಿಷೇಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ೮ ಗಂಟೆಗೆ ಅನ್ನಪೂರ್ಣ ಪ್ರಸಾದ, ೯.೩೦ಕ್ಕೆ ಪಾಷಣಮೂರ್ತಿ ಕಲ್ಕುಡ್ಡಸ್ವಾಮಿಯ ನೇಮೋತ್ಸವ, ತಾ. ೧೦ರ ಬಳಿಗ್ಗೆ ೫ ಗಂಟೆಗೆ ಚಾಮುಂಡಿ ಮತ್ತು ರಾಹುಗುಳಿಗ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ೮೭೬೨೧೩೯೯೪೨ ಹಾಗೂ ೮೭೬೨೧೪೬೪೪೨ ಅನ್ನು ಸಂಪರ್ಕಿಸಬಹುದಾಗಿದೆ.