ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಏ. ೪ : ಕೇಂದ್ರ ಸರ್ಕಾರವು ಕೈಗೊಂಡಿರುವ ರಫ್ತು ಉತ್ತೇಜನ ಮತ್ತು ಹಣಕಾಸು ನೀತಿಯಿಂದಾಗಿ ೨೦೨೧-೨೨ ನೇ ಸಾಲಿನಲ್ಲಿ ಒಟ್ಟು ೪೧೮ ಬಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದ ಸರಕುಗಳು ರಫ್ತಾಗಿ ದಾಖಲೆಯೇ ನಿರ್ಮಾಣವಾಗಿದೆ.

ಇದೀಗ ಕೊಡಗಿನ ಜೀವನಾಡಿ ಆಗಿರುವ ಕಾಫಿಯ ರಫ್ತಿನಲ್ಲೂ ಕೂಡ ದೇಶವು ಮೊಟ್ಟ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕಾಫಿಯನ್ನು ರಫ್ತು ಮಾಡಲಾಗಿದೆ. ದೇಶದ ಕಾಫಿ ರಫ್ತು ಮೌಲ್ಯ ಯಾವತ್ತೂ ಒಂದು ಬಿಲಿಯನ್ ಅಮೇರಿಕನ್ ಡಾಲರ್ ಮೀರಿರಲಿಲ್ಲ. ಆದರೆ ಕಳೆದ ಸಾಲಿನಲ್ಲಿ ಈ ಮೌಲ್ಯ ೧.೦೪೨ ಅಮೇರಿಕನ್ ಡಾಲರ್ ಮೊತ್ತವನ್ನೂ ಮೀರಿದ್ದು ೨೦೨೦-೨೧ ನೇ ಸಾಲಿಗೆ ಹೋಲಿಸಿದರೆ ರಫ್ತು ಮೌಲ್ಯದಲ್ಲಿ ಶೇಕಡಾ ೪೨ ರಷ್ಟು ಹೆಚ್ಚಳ ದಾಖಲಾಗಿದೆ. ಎರಡು ವರ್ಷಗಳ ಕೋವಿಡ್ ಲಾಕ್ ಡೌನ್ , ಉಕ್ರೇನ್- ರಷ್ಯಾ ನಡುವಿನ ಯುದ್ಧದ ಕಾರಣದಿಂದಾಗಿ ರಫ್ತು ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದರೂ ರಫ್ತಿನಲ್ಲಿ ಗಣನೀಯ ಏರಿಕೆ ದಾಖಲಾಗಿರುವುದು ಉತ್ತಮ ಸಾಧನೆಯೇ ಆಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು ಕಾಫಿ ರಫ್ತು ಮೌಲ್ಯ ೭೩೪.೯೮ ಮಿಲಿಯನ್ ಡಾಲರ್ ಆಗಿತ್ತು. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಈ ಮೌಲ್ಯ ೫೪೫೧.೯೦ ಕೋಟಿ ರೂಪಾಯಿಗಳಾಗಿತ್ತು.

(ಮೊದಲ ಪುಟದಿಂದ) ಈಗ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ ೪೨ ರಷ್ಟು ಏರಿಕೆ ಕಂಡು ೭೭೬೬.೭೭ ಕೋಟಿ ರೂಪಾಯಿಗಳಿಗೆ ಏರಿಕೆ ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು ೩.೧೦ ಲಕ್ಷ ಟನ್ ಗಳಷ್ಟು ಕಾಫಿ ರಫ್ತಾಗಿದ್ದರೆ ಕಳೆದ ಸಾಲಿನಲ್ಲಿ ಒಟ್ಟು ೪.೧೯ ಲಕ್ಷ ಟನ್ ಕಾಫಿಯನ್ನು ರಫ್ತು ಮಾಡಲಾಗಿದೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆ ಜಿ ಜಗದೀಶ ಅವರು ಕೇಂದ್ರ ವಾಣಿಜ್ಯ ಸಚಿವಾಲಯವು ೧.೦೭ ಬಿಲಿಯನ್ ಡಾಲರ್ ಮೌಲ್ಯದ ಕಾಫಿ ರಫ್ತು ಮಾಡುವ ಗುರಿಯನ್ನು ನಿಗದಿಪಡಿಸಿತ್ತು. ಬ್ರೆಜಿಲ್ ಹಾಗೂ ಕೊಲಂಬಿಯಾದಲ್ಲಿ ಹಿಮಪಾತದಿಂದಾಗಿ ಬೆಳೆ ನಷ್ಟ , ಜತೆಗೆ ಜಾಗತಿಕ ಮಾರುಕಟ್ಟೆಗೆ ಕಾಫಿಯ ಸರಬರಾಜು ಕಡಿಮೆ ಆಗಿದ್ದರಿಂದ ಅರೇಬಿಕಾ ಕಾಫಿಯ ಬೆಲೆ ಏರಿಕೆ ಆಗಿ ರಫ್ತು ದಾಖಲೆ ಪ್ರಮಾಣದಲ್ಲಿ ಆಯಿತು ಎಂದರು. ರಫ್ತನ್ನು ಉತ್ತೇಜಿಸಲು ದೇಶದ ರಫ್ತುದಾರರು ಮತ್ತು ೧೨ ಕ್ಕೂ ಹೆಚ್ಚು ವಿದೇಶಗಳ ಆಮದುದಾರರ ಜತೆ ವರ್ಚುಯಲ್ (viಡಿಣuಚಿಟ) ಸಭೆಯನ್ನು ಕಾಫಿ ಮಂಡಳಿ ಆಯೋಜಿಸಿತ್ತು ಎಂದು ಅವರು ತಿಳಿಸಿದರು.

ದೇಶದ ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ್ ರಾಜಾ ಅವರು ಮಾತನಾಡಿ ಹಲವು ಸವಾಲುಗಳ ನಡುವೆಯೂ ಕಾಫಿ ರಫ್ತು ಏರಿಕೆ ದಾಖಲಿಸಿದೆ ಎಂದರು. ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ , ಕೋವಿಡ್ ಲಾಕ್ ಡೌನ್ , ಇಂಧನ ದರ ಏರಿಕೆಯಿಂದ ಹೆಚ್ಚಳಗೊಂಡ ಸಾಗಾಣಿಕಾ ವೆಚ್ಚ, ಕಂಟೇನರ್ ಗಳ ಕೊರತೆ ಮತ್ತು ರಷ್ಯಾ ಉಕ್ರೇನ್ ಯುದ್ಧ ಕೂಡ ಕರಗುವ (iಟಿsಣಚಿಟಿಣ) ಕಾಫಿ ರಫ್ತಿಗೆ ಹೊಡೆತ ನೀಡಿತು ಎಂದರು.

ದೇಶದಿAದ ರಫ್ತಾಗುವ ಕರಗುವ ಕಾಫಿಯ ಒಟ್ಟು ಶೇಕಡಾ ೧೫ ರಷ್ಟನ್ನು ರಷ್ಯಾವೇ ಆಮದು ಮಾಡಿಕೊಳ್ಳುತ್ತಿದೆ. ಕಡಿಮೆ ಬೆಲೆಯ ಕಾಫಿಯನ್ನು ವಿದೇಶಗಳಿಂದ ಇಲ್ಲಿಗೆ ಆಮದು ಮಾಡಿಕೊಂಡು ಅದನ್ನು ಕರಗುವ ಕಾಫಿಯನ್ನಾಗಿ ಸಂಸ್ಕರಿಸಿ ಪುನಃ ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಹೀಗಾಗಿ ದೇಶದ ಒಟ್ಟು ಉತ್ಪಾದನೆ ೩.೫ ಲಕ್ಷ ಟನ್‌ಗಳಾಗಿದ್ದರೂ ಒಟ್ಟು ೪.೧೯ ಲಕ್ಷ ಟನ್ ರಫ್ತು ಮಾಡಲಾಗಿದೆ.

೨೦೨೦-೨೧ ನೇ ಸಾಲಿನಲ್ಲಿ ದೇಶದ ಒಟ್ಟು ಕಾಫಿ ಉತ್ಪಾದನೆ ೩.೪೮ ಲಕ್ಷ ಟನ್‌ಗಳೆಂದು ಕಾಫಿ ಮಂಡಳಿಯು ತನ್ನ ಮುಂಗಾರು ನಂತರದ ಅಂದಾಜಿನ ವರದಿಯಲ್ಲಿ ತಿಳಿಸಿದ್ದು ಇದರಲ್ಲಿ ೨.೪೯ ಲಕ್ಷ ಟನ್ ರೊಬಸ್ಟಾ ಮತ್ತು ೯೯ ಸಾವಿರ ಟನ್ ಅರೇಬಿಕಾ ಕಾಫಿ ಆಗಿದೆ.

ದಾಖಲೆ ಪ್ರಮಾಣದ ಕಾಫಿ ರಫ್ತಿನ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ಅವರು ರಷ್ಯಾ - ಉಕ್ರೇನ್ ಯುದ್ಧ ನಿಂತ ನಂತರ ಮತ್ತೆ ಕಾಫಿ ದರ ಏರಿಕೆ ಕಾಣಲಿದೆ ಎಂದು ಹೇಳಿದರು. ಕಾಫಿ ಬೆಳೆಯುವ ಪ್ರಮುಖ ದೇಶಗಳಾದ ಬ್ರೆಜಿಲ್ ವಿಯಟ್ನಾಂ, ಕೊಲಂಬಿಯಾ ಮುಂತಾದವು ತಮ್ಮ ಉತ್ಪಾದನೆಯ ಕೆಲವಂಶವನ್ನು ಬಫರ್ ಸ್ಟಾಕ್ ಆಗಿ ದಾಸ್ತಾನು ಇರಿಸುತ್ತಿದ್ದವು. ಅದರೆ ಬದಲಾದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಈಗ ಬಫರ್ ಸ್ಟಾಕ್ ಸಂಪೂರ್ಣ ಖಾಲಿಯಾಗಿದೆ ಎಂದರು. ಇನ್ನು ಕನಿಷ್ಟ ಎರಡು ವರ್ಷ ಕಾಫಿ ದರ ಏರುಮುಖವಾಗಿರಲಿದೆ ಎಂದು ಅವರು ಹೇಳಿದರು.