ಮಡಿಕೇರಿ, ಏ.೪: ಮಡಿಕೇರಿಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ತಾ. ೬ ರಂದು ಕರ್ನಾಟಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೆಸರಾಂತ ವಿದುಷಿ ದಿವ್ಯಗಿರಿಧರ್ ಅವರು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ತಾ. ೬ ರಂದು ಸಂಜೆ ೬ ಗಂಟೆಗೆ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದಿವ್ಯಗಿರಿಧರ್ ಅವರು ವಿದುಷಿ ಎಂ.ಎಸ್.ವಿದ್ಯಾ ಮತ್ತು ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ಶಿಷ್ಯೆಯಾಗಿದ್ದು, ಬೆಂಗಳೂರಿನ ಗಾನಸುಧಾ ಸಂಗೀತ ಅಕಾಡೆಮಿಯ ಮುಖ್ಯಸ್ಥೆಯಾಗಿದ್ದಾರೆ. ತಿರುಪತಿಯ ಶ್ರೀ ವೆಂಕಟೇಶ್ವರ ರೆಕಾರ್ಡಿಂಗ್ ಯೋಜನೆಯಲ್ಲಿ ತೊಡಗಿಸಿಕೊಂಡ ವಿದುಷಿಯರಲ್ಲಿ ಒಬ್ಬರಾಗಿದ್ದಾರೆ. ಈ ಕಾರ್ಯಕ್ರಮವನ್ನು ಮಡಿಕೇರಿಯ ಹಿರಿಯ ವಿದುಷಿ ಜಯಲಕ್ಷಿö್ಮ ರಮೇಶ್ ಪ್ರಾಯೋಜಿಸಿದ್ದಾರೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.