ಮಡಿಕೇರಿ, ಏ. ೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಳೆದ ಒಂಬತ್ತೂವರೆ ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ವೈ. ಶಕೀಲಾ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಹಾಕಿ ತರಬೇತಿದಾರರಾದ ಬಿಂದ್ಯಾ, ಸುಬ್ಬಯ್ಯ, ಅಥ್ಲೆಟಿಕ್ ತರಬೇತಿದಾರರಾದ ಮಹಾಬಲ, ಮನು ಮಾತನಾಡಿದರು. ಗಣಪತಿ, ಶೃತಿ, ಕೃಷ್ಣಾಜಿ, ಜನನಿ, ಶೈಲಾ, ಕವಿತಾ, ಅರ್ಪಿತ, ಪ್ರಕಾಶ್, ವೆಂಕಟೇಶ್ ಇತರರು ಇದ್ದರು.