ಮಡಿಕೇರಿ, ಏ. ೩: ಹುಲಿ ಉಗುರು ಮಾರಾಟ ಯತ್ನ ಪ್ರಕರಣವೊಂದನ್ನು ಬೇಧಿಸಿರುವ ಅರಣ್ಯ ಸಂಚಾರ ದಳದ ಪೊಲೀಸರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.

ಕುಶಾಲನಗರ ತಾಲೂಕು ಹೆಬ್ಬಾಲೆ ಮರೂರು ಗ್ರಾಮದಲ್ಲಿ ಆರೋಪಿ ಗಳಾದ ಗಣೇಶ ಮತ್ತು ಯೋಗೇಶ್ ಎಂಬವರು ತಮ್ಮ ಜಮೀನಿನಲ್ಲಿ ಸುಮಾರು ಒಂದು ವರ್ಷದ ಹಿಂದೆ ಕಾಡು ಹಂದಿಯ ಉಪಟಳಕ್ಕೆ ಹಾಕಿದ್ದ ವಿದ್ಯುತ್ ತಂತಿಬೇಲಿಗೆ ಸಿಲುಕಿ ವಿದ್ಯುತ್ ಸ್ಪರ್ಶಗೊಂಡು ಹುಲಿಯೊಂದು ಮೃತಪಟ್ಟಿತ್ತು.

ಆ ಮೃತಪಟ್ಟ ಹುಲಿಯನ್ನು ಗಣೇಶ, ಯೋಗೇಶ, ರಮೇಶ ಎಂಬವರು ಹೊಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದರು. ನಂತರ ಆರೋಪಿಗಳಾದ ರಮೇಶ, ದೊರೇಶ, ನಟೇಶ ಎಂಬವರುಗಳು ರಾತ್ರಿ ಗುಂಡಿಯಲ್ಲಿ ಹೂತು ಹಾಕಲಾಗಿದ್ದ ಹುಲಿಯ ಕಾಲಿನ ಉಗುರುಗಳು, ಹಲ್ಲುಗಳು ಮತ್ತು ಚರ್ಮದ ಚಿಕ್ಕ ಚೂರನ್ನು ತೆಗೆದಿದ್ದಾರೆ. ನಂತರ ಆರೋಪಿಗಳಾದ ನವೀನ್ ಮತ್ತು ಶೇಖರ್ ಎಂಬವರುಗಳು ನಿನ್ನೆ ದಿನ ಹುಲಿಯ ೪ ಉಗುರು ಮತ್ತು ಹಲ್ಲಿನ ಚೂರುಗಳನ್ನು ಸೀಗೆಹೊಸೂರು ಜಂಕ್ಷನ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಂತರ ಆರೋಪಿಗಳ ಹೇಳಿಕೆ ಮೇರೆಗೆ ಮರೂರಿಗೆ ತೆರಳಿ ಜೆಸಿಬಿ ಸಹಾಯದಿಂದ ಗುಂಡಿ ತೆಗೆದು ಪರಿಶೀಲಿಸಿದಾಗ ಹುಲಿಯನ್ನು ಹೂತು ಹಾಕಿದ್ದ ಜಾಗದಲ್ಲಿ ಹುಲಿಯ ಒಂದು ತಲೆ ಬುರುಡೆ ಅದರೊಂದಿಗೆ ೨ ಹಲ್ಲುಗಳು, ಕೆಳ ದವಡೆಯ ಮೂಳೆ ಅದರೊಂದಿಗೆ ೨ ಹಲ್ಲುಗಳು, ಹುಲಿಯ ಬೆನ್ನ ಮೂಳೆ, ಹುಲಿಯ ಎರಡು ಪಕ್ಕೆಲುಬು, ಹುಲಿಯ ಕಾಲಿನ ಮೂಳೆಗಳು, ಹುಲಿಯ ವಿವಿಧ ಅಳತೆಯ ೫೫ ಚಿಕ್ಕ ಮೂಳೆಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿ ರಮೇಶ ಮತ್ತು ಸುರೇಶನ ಮನೆಯಿಂದ ಹುಲಿಯ ಉಗುರು ಮತ್ತು ಹಲ್ಲುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಒಟ್ಟು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೭ ಉಗುರುಗಳು, ಹುಲಿಯ ೧ ಕೋರೆ ಹಲ್ಲು ಹಾಗೂ ೬ ಹಲ್ಲಿನ ಚೂರುಗಳು, ಹುಲಿಯ ಚರ್ಮದ ಒಂದು ಚಿಕ್ಕ ಭಾಗ, ಹುಲಿಯ ಒಂದು ತಲೆಬುರುಡೆ ಅದರೊಂದಿಗೆ ಹುಲಿಯ ೨ ಹಲ್ಲುಗಳು, ಕೆಳದವಡೆಯ ಮೂಳೆ, ಹುಲಿಯ ಬೆನ್ನು ಮೂಳೆ, ಹುಲಿಯ ಎರಡು ಪಕ್ಕೆಲುಬು, ಹುಲಿಯ ಕಾಲಿನ ಮೂಳೆಗಳು, ಹುಲಿಯ ವಿವಿಧ ಅಳತೆಯ ೫೫ ಚಿಕ್ಕ ಮೂಳೆಗಳನ್ನು ಹಾಗೂ (ಕೆ.ಎ. ೪೫ ಕ್ಯೂ ೬೩೭೩) ಸ್ಟಾರ್ ಸಿಟಿ ಮೋಟಾರ್ ಬೈಕನ್ನು ವಶಪಡಿಸಿಕೊಂಡ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕೆ.ವಿ. ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಚಂದ್ರಕಾAತ್ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಹೆಡ್‌ಕಾನ್ಸ್ ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಎ.ಜಿ., ಮೋಹನ, ದೇವಯ್ಯ, ಯೋಗೇಶ್ ಮತ್ತು ಕಾನ್ಸ್ಟೇಬಲ್‌ಗಳಾದ ಸ್ವಾಮಿ, ಮಂಜುನಾಥ, ನಂದ ಪಾಲ್ಗೊಂಡಿ ದ್ದರು. ಬಂಧಿತ ಆರೋಪಿಗಳಲ್ಲಿ ಶೇಖರ್ ಪಿರಿಯಾಪಟ್ಟಣದವನಾಗಿದ್ದು, ನವೀನ್ ಹೊಳೆನರಸೀಪುರ ಮೂಲ ದನಾಗಿದ್ದಾನೆ. ಉಳಿದ ಆರೋಪಿಗಳು ಮರೂರು ಗ್ರಾಮದವರಾಗಿದ್ದಾರೆ.